ತೀವ್ರ ಟೀಕೆ, ವ್ಯಂಗ್ಯಗಳ ಬಳಿಕ ಗುಟ್ಕಾ ಕಂಪನಿಯ ಜಾಹೀರಾತಿನಿಂದ ಹಿಂದಿ ಸಿನಿಮಾ ನಟ ಕಿಲಾಡಿ ಅಕ್ಷಯ್ ಕುಮಾರ್ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಅವು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
`ನನ್ನ ಎಲ್ಲ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ಕೆಲವು ದಿನಗಳಿಂದ ನಿಮ್ಮ ಪ್ರತಿಕ್ರಿಯೆಗಳು ನನ್ನ ಮೇಲೆ ಆಳವಾದ ಪರಿಣಾಮ ಬೀರಿದೆ. ನಾನು ತಂಬಾಕನ್ನು ಪ್ರೋತ್ಸಾಹಿಸುವುದಿಲ್ಲ ಮತ್ತು ಪ್ರೋತ್ಸಾಹಿಸಲ್ಲ ಕೂಡಾ, ವಿಮಲ್ ಎಲಾಚಿ ಜೊತೆಗೆ ನನ್ನ ನಂಟಿನ ಬಗ್ಗೆ ನಿಮ್ಮ ಭಾವನೆಗಳನ್ನು ಗೌರವಿಸುತ್ತೇನೆ. ನಾನು ಎಲ್ಲ ವಿದೇಯತೆಯೊಂದಿಗೆ ನಾನು ಹಿಂದೆ ಸರಿಯುತ್ತಿದ್ದೇನೆ. ನನಗೆ ಸಿಕ್ಕಿರುವ ಜಾಹೀರಾತಿನ ಸಂಪೂರ್ಣ ಶುಲ್ಕವನ್ನು ಒಳ್ಳೆಯ ಉದ್ದೇಶಕ್ಕೆ ನೀಡುತ್ತೇನೆ. ನನ್ನ ಜಾಹೀರಾತು ಒಪ್ಪಂದದ ಅವಧಿ ಮುಗಿಯುವವರೆಗೆ ನನ್ನ ಜಾಹೀರಾತನ್ನು ಕಂಪನಿ ಪ್ರಸಾರ ಮಾಡಬಹುದು, ಭವಿಷ್ಯದಲ್ಲಿ ಆಯ್ಕೆಗಳನ್ನು ಮಾಡಿಕೊಳ್ಳುವಾಗ ಜಾಗೃತನಾಗಿರುತ್ತೇನೆ ಎಂದು ಭರವಸೆ ನೀಡುತ್ತೇನೆ. ಅದಕ್ಕೆ ಪ್ರತಿಯಾಗಿ ನಾನು ಸದಾ ನಿಮ್ಮ ಪ್ರೀತಿಯನ್ನು ಕೋರುತ್ತೇನೆ’
ಎಂದು ಅಕ್ಷಯ್ ಕುಮಾರ್ ಬರೆದುಕೊಂಡಿದ್ದಾರೆ.
ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲ್ಲ ಎಂದು ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದ ಅಕ್ಷಯ್ ಕುಮಾರ್ ಈಗ ಶಾರುಖ್ಖಾನ್, ಅಜಯ್ ದೇವಗನ್ ಜೊತೆಗೆ ವಿಮಲ್ ಎಲಾಚಿ ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಟೀಕೆಗೆ ಕಾರಣವಾಗಿತ್ತು. ಅಕ್ಷಯ್ ಕುಮಾರ್ ಹಳೆಯ ಹೇಳಿಕೆ ಮತ್ತು ಈಗಿನ ಜಾಹೀರಾತಿನ ವೀಡಿಯೋವನ್ನು ಹೋಲಿಸಿ ಮೆಮೆಯನ್ನೂ ಮಾಡಿದ್ದರು.