ಚೀನಾದ (China) ದೈತ್ಯ ಕಂಪನಿಗಳಲ್ಲಿ ಒಂದಾಗಿರುವ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ (Alibaba) ಮೂರು ತಿಂಗಳಲ್ಲಿ 10 ಸಾವಿರದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ.
ಆಲಿಬಾಬಾ ಕಂಪನಿಯ ಆದಾಯ ಶೇಕಡಾ 50ರಷ್ಟು ಕುಸಿದಿರುವ ಹಿನ್ನೆಲೆಯಲ್ಲಿ ನೌಕರಿಗೆ ಕತ್ತರಿ (Job Cut) ಹಾಕಲಾಗಿದೆ.
ಜೂನ್ 30ಕ್ಕೆ ಅಂತ್ಯವಾಗುವ ಮೊದಲ ತ್ರೈಮಾಸಿಕ ಅವಧಿಯಲ್ಲಿ ಅಲಿಬಾಬಾ ಕಂಪನಿ 9,246 ಮಂದಿಯನ್ನು ನೌಕರಿಯಿಂದ ತೆಗೆದುಹಾಕಿದೆ (Layoffs).
ಸದ್ಯಕ್ಕೆ ಅಲಿಬಾಬಾ ಕಂಪನಿಯಲ್ಲಿ 2,45,700 ಮಂದಿ ಉದ್ಯೋಗಿಗಳಿದ್ದಾರೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದ್ದಲ್ಲಿ ಅಲಿಬಾಬಾ ಕಂಪನಿಯ ಆದಾಯ ಅರ್ಧದಷ್ಟು ಅಂದರೆ 3.4 ಬಿಲಿಯನ್ ಅಮೆರಿಕನ್ ಡಾಲರ್ಗೆ (Dollar) ಕುಸಿದಿದೆ. ಕಳೆದ ಬಾರಿ ಜೂನ್ ವೇಳೆಗೆ 45.14 ಶತಕೋಟಿ ಯ್ಯುಹಾನ್ (Yuan) ಆದಾಯವಿತ್ತು.
ADVERTISEMENT
ADVERTISEMENT