ಸುಳ್ಳು ಸುದ್ದಿಗಳನ್ನು ಬಯಲು ಮಾಡುವ ಭಾರತದ ಪ್ರಮುಖ ವೆಬ್ಸೈಟ್ ಸಹ ಸಂಸ್ಥಾಪಕ ಮಹಮ್ಮದ್ ಜುಬೈರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಗಲ್ಫ್ ರಾಷ್ಟçಗಳ ಕಟು ಟೀಕೆಗೆ ಕಾರಣವಾಗಿ ಬಿಜೆಪಿ ಮುಜುಗರಕ್ಕೀಡಾಗಿದ್ದ ನೂಪುರು ಶರ್ಮಾ ಟೈಮ್ಸ್ ನೌ ಸುದ್ದಿವಾಹಿನಿಯಲ್ಲಿ ಮಹಮ್ಮದ್ ಪೈಗಂಬರ್ ಬಗ್ಗೆ ಆಡಿದ್ದ ಅವಹಳೇನಕಾರಿ ಮಾತನ್ನು ಪತ್ರಕರ್ತ ಜುಬೈರ್ ಬಯಲು ಮಾಡಿದ್ದರು.
ಅಲ್ಲದೇ ಉತ್ತರಾಖಂಡ್ನ ಧರ್ಮಸಂಸತ್ತಿನಲ್ಲಿ ಮುಸ್ಲಿಮರ ಬಗ್ಗೆ ಕೆಲವು ಸ್ವಾಮೀಜಿಗಳು ನೀಡಿದ್ದ ಪ್ರಚೋದನಕಾರಿ ಭಾಷಣದ ಬಗ್ಗೆ ಜುಬೈರ್ ಟ್ವೀಟಿಸಿ ಗಮನ ಸೆಳೆದಿದ್ದರು.
1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಬಗ್ಗೆ ನಿನ್ನೆ ತಮ್ಮ ಭಾನುವಾರದ ಮನ್ ಕೀ ಬಾತ್ನಲ್ಲಿ ಮಾತಾಡುವ ವೇಳೆ `ಕರಾಳ ದಿನಗಳು’ ಎಂದು ಪ್ರಧಾನಿ ಮೋದಿ ಹೇಳಿದ ಮರು ದಿನವೇ ಪತ್ರಕರ್ತ ಮಹಮ್ಮದ್ ಜುಬೈರ್ ಬಂಧನ ಆಗಿರುವುದು ಸೋಜಿಗ.
ಜುಬೈರ್ ಬಂಧನದ ಬಗ್ಗೆ ಆಲ್ಟ್ ನ್ಯೂಸ್ನ ಮತ್ತೋರ್ವ ಸಹ ಸಂಸ್ಥಾಪಕ ಪ್ರತೀಕ್ ಸಿನ್ಹಾ ಟ್ವೀಟಿಸಿದ್ದಾರೆ.
`ದೆಹಲಿ ಪೊಲೀಸರ ವಿಶೇಷ ಘಟಕ 2020ರ ಪ್ರಕರಣದಲ್ಲಿ ವಿಚಾರಣೆಗಾಗಿ ಮಹಮ್ಮದ್ ಜುಬೈರ್ ಅವರನ್ನು ಕರೆದಿತ್ತು. ಆ ಪ್ರಕರಣದಲ್ಲಿ ಜುಬೈರ್ ಬಂಧನದಿAದ ಹೈಕೋರ್ಟ್ನಿಂದ ರಕ್ಷಣೆ ಪಡೆದಿದ್ದಾರೆ.
ಆದರೆ ಇವತ್ತು ಸಂಜೆ 6.45ಕ್ಕೆ ಬೇರೊಂದು ಎಫ್ಐಆರ್ ನಡಿ ಜುಬೈರ್ ಅವರನ್ನು ಬಂಧಿಸಿರುವುದಾಗಿ ದೆಹಲಿ ಪೊಲೀಸರು ನಮಗೆ ತಿಳಿಸಿದ್ದಾರೆ. ಆದರೆ ಯಾವ ಪ್ರಕರಣದಲ್ಲಿ ಕಾನೂನುಬದ್ಧವಾಗಿ ನೋಟಿಸ್ ನೀಡಿಲ್ಲ. ಸತತ ಮನವಿಯ ಹೊರತಾಗಿಯೂ ನಮಗೆ ಎಫ್ಐಆರ್ ಪ್ರತಿ ನೀಡಿಲ್ಲ’
ಎಂದು ಪ್ರತಿಕ್ ಸಿನ್ಹಾ ಟ್ವೀಟಿಸಿದ್ದಾರೆ.