ಬೆಂಗಳೂರು ಮೂಲದ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಪುಣೆ ಮೂಲದ ಕಾಮೋಸ್ ಕೋ ಆಪರೇಟಿವ್ ಬ್ಯಾಂಕ್ನೊಂದಿಗೆ ವಿಲೀನಗೊಂಡಿದೆ. ಎರಡೂ ಕೋ-ಆಪರೇಟಿವ್ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಒಪ್ಪಿಗೆ ನೀಡಿದೆ.
ಬೆಂಗಳೂರು ಮೂಲದ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಒಟ್ಟು 13 ಶಾಖೆಗಳು ಅಂದರೆ ಬೆಂಗಳೂರಲ್ಲಿ 12 ಮತ್ತು ಮೈಸೂರಲ್ಲಿ 1 ಶಾಖೆಯನ್ನು ಹೊಂದಿದೆ. ಕಳೆದ ವರ್ಷದ ಆಗಸ್ಟ್ ಮಾಹಿತಿ ಪ್ರಕಾರ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ 1,393 ಕೋಟಿ ರೂಪಾಯಿ ವಹಿವಾಟನ್ನು ಹೊಂದಿದೆ.
ಬೆಂಗಳೂರು ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ನ ವಿಲೀನದೊಂದಿಗೆ 18 ಸಹಕಾರಿ ಬ್ಯಾಂಕ್ಗಳು ಕಾಮೋಸ್ ಕೋ-ಆಪರೇಟಿವ್ ಬ್ಯಾಂಕ್ನಲ್ಲಿ ವಿಲೀನವಾಗಿವೆ. ಈ ವಿಲೀನದೊಂದಿಗೆ ಪುಣೆ ಮೂಲದ ಕಾಮೋಸ್ ಬ್ಯಾಂಕ್ ಕರ್ನಾಟಕದಲ್ಲಿ ತನ್ನ ನೆಲೆಯನ್ನು ವಿಸ್ತರಿಸಲು ಅನುಕೂಲವಾಗಲಿದೆ.
ಎರಡೂ ಬ್ಯಾಂಕ್ಗಳ ವಿಲೀನದ ಆರ್ಬಿಐ ಒಪ್ಪಿಗೆ ನೀಡಿರುವ ಆದೇಶವನ್ನು ಹಂಚಿಕೊಂಡಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿಸೂರ್ಯ ಅವರು
ʻಈ ವಿಲೀನದಿಂದ ಜೀವಮಾನದ ಉಳಿತಾಯ ಅಪಾಯದಲ್ಲಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮಧ್ಯಮ ವರ್ಗದ ಠೇವಣಿದಾರರಿಗೆ ಅನುಕೂಲವಾಗಲಿದೆ. ಈ ಎಲ್ಲ ಸಹಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳುʼ