2023-27 ರ 5 ವರ್ಷಗಳ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಾಧ್ಯಮ ಹಕ್ಕು ಹರಾಜು ಪ್ರಕಿಯೆಯಿಂದ ತೀವ್ರ ಪೈಪೋಟಿ ನಿಡಿದ್ದ ಅಮೆಜಾನ್ ಕಂಪಡೆನಿ ಹೊರಬಿದ್ದಿದೆ ಎಂದು NDTV ಸುದ್ದಿವಾಹಿನಿ ವರದಿ ಮಾಡಿದೆ.
ಇದೇ ಬಾನುವಾರ ಜೂನ್ 12 ರಂದು ಐಪಿಎಲ್ ಮಾಧ್ಯಮ ಹಕ್ಕು ಖರೀದಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಮೊದಲೇ ರಿಲಯನ್ಸ್ ಸೇರಿದಂತೆ ಇತರೆ ಕಂಪನೆಗಳಿಗೆ ತೀವ್ರಮಟ್ಟದ ಸ್ಪರ್ಧೆ ನೀಡಿದ್ದ ಅಮೆಜಾನ್ ಹೊರಬಿದ್ದಿದೆ ಎಂದು ತಿಳಿದುಬಂದಿದೆ.
ಅಮೆಜಾನ್ನ ಜೆಫ್ ಬೆಜೋಸ್ ಅವರು ಹರಾಜು ಪ್ರಕ್ರಿಯೆಯಿಂದ ಹೊರಬಿದ್ದ ಬಳಿಕ ಮುಖೇಶ್ ಅಂಬಾನಿಯವರ ರಿಲಯನ್ಸ್, ಡಿಸ್ನಿ ಮತ್ತು ಸೋನಿ ಗ್ರೂಪ್ಗಳು ಭಾಗವಹಿಸಲಿವೆ.
2017-22 ರ ಅವಧಿಗೆ 2017 ರಲ್ಲಿ ನಡೆದಿದ್ದ ಹರಾಜು ಪ್ರಕ್ರಿಯೆಯಲ್ಲಿ ಸೋನಿ ಪಿಕ್ಚರ್ಸ್ ಕಂಪೆನಿ 16,347.50 ಕೋ.ರೂ ಬಿಡ್ ಮಾಡಿ, ಮಾಧ್ಯಮ ಪ್ರಸಾರ ಹಕ್ಕು ಖರೀದಿಸಿತ್ತು. ಈ ಹರಾಜು ಪ್ರಕ್ರಿಯೆ ಪ್ರಕಾರ ಪ್ರತಿಯೊಂದು ಪಂದ್ಯಕ್ಕೆ 55 ಕೋ.ರೂಗಳಂತೆ ತೆಗದುಕೊಳ್ಳಲಾಗಿತ್ತು.
2008 ರಲ್ಲಿ ಸೋನಿ ನೆಟ್ವರ್ಕ್ 10 ವರ್ಷಗಳ ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕನ್ನು 8200 ಕೋ.ರೂಗಳಿಗೆ ಖರೀದಿಸಿತ್ತು. 2015 ರಲ್ಲಿ ಅಂತರಾಷ್ಟ್ರೀಯ ಡಿಜಿಟಲ್ ಹಕ್ಕು ಖರೀದಿಸಿದ್ದ ನೊವಿ ಡಿಜಿಟಲ್ ಸಂಸ್ಥೆ ಇದಕ್ಕಾಗಿ 302.2 ಕೋಟಿ ರೂ.ಗಳನ್ನು ಪಾವತಿಸಿತ್ತು.
ಕಳೆದ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಲಕ್ನೋ ಸೂಪರ್ ಜೇಂಟ್ಸ್ ತಂಡಗಳು ಪಾದಾರ್ಪಣೆ ಮಾಡಿವೆ. ಆ ಮೂಲಕ ಐಪಿಎಲ್ ಬ್ರಾಂಡ್ ಮೌಲ್ಯ ಮತ್ತಷ್ಟು ಹೆಚ್ಚಳವಾಗಿದೆ.
2023-27 ರ ವರೆಗಿನ ಐಪಿಎಲ್ ಬ್ರಾಂಡ್ ಮೌಲ್ಯ 60 ಸಾವಿರ ಕೋ.ರೂ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಜೂನ್ 12 ರಂದು ಹರಾಜು ಪ್ರಕ್ರಿಯೆ ಮುಕ್ತಾಯವಾದ ನಂತರವಷ್ಟೇ ನಿರ್ಧಿಷ್ಟವಾಗಿ ತಿಳಿದುಬರಲಿದೆ.