ಲೋಕಸಭಾ ಚುನಾವಣೆ ಮತ್ತು ಆಂಧ್ರಪ್ರದೇಶ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ ಮತ್ತು ಬಿಜೆಪಿ ಹಾಗೂ ಜನಸೇನಾ ಮೈತ್ರಿ ಘೋಷಿಸಿಕೊಂಡಿವೆ. ಈ ಬಗ್ಗೆ ಬಿಜೆಪಿ ಮತ್ತು ಟಿಡಿಪಿ ಅಧಿಕೃತ ಪ್ರಕಟಣೆ ಹೊರಡಿಸಿವೆ.
ಲೋಕಸಭಾ ಚುನಾವಣೆ ಜೊತೆಯಲ್ಲೇ ಆಂಧ್ರದಲ್ಲಿ ವಿಧಾನಸಭಾ ಚುನಾವಣೆ ಕೂಡಾ ನಡೆಯಲಿದೆ.
ಆಂಧ್ರದ ಒಟ್ಟು 25 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಟಿಡಿಪಿ ಸ್ಪರ್ಧೆ ಮಾಡಲಿದೆ. 6 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಎರಡಲ್ಲಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಸ್ಪರ್ಧೆ ಮಾಡುವ ಬಗ್ಗೆ ತೀರ್ಮಾನವಾಗಿದೆ.
ಮಾರ್ಚ್ 16 ಅಥವಾ 17ರಂದು ಆಂಧ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಜಂಟಿಯಾಗಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತಾಡುವ ಮೂಲಕ ಮೈತ್ರಿ ಸಂದೇಶ ರವಾನಿಸಲಿದ್ದಾರೆ.
ಎರಡು ಬಾರಿ ಎನ್ಡಿಎಯಿಂದ ಹೊರಹೋಗಿದ್ದ ಚಂದ್ರಬಾಬು ನಾಯ್ಡು ಮೂರನೇ ಬಾರಿಗೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ.
2018ರಲ್ಲಿ ಬಿಜೆಪಿ ಮೈತ್ರಿಕೂಟ ಕಡಿದುಕೊಂಡಿದ್ದರು ಚಂದ್ರಬಾಬು ನಾಯ್ಡು. 25ರಲ್ಲಿ ಆಂಧ್ರಪ್ರದೇಶ ಸಿಎಂ ಜಗನ್ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ 22ರಲ್ಲಿ ಗೆದ್ದರೆ ಟಿಡಿಪಿ ಕೇವಲ 3ರಲ್ಲಿ ಗೆದ್ದಿತ್ತು.
ವಿಧಾನಸಭಾ ಚುನಾವಣೆಯಲ್ಲಿ 175 ಕ್ಷೇತ್ರಗಳಲ್ಲಿ ವೈಎಸ್ಆರ್ ಕಾಂಗ್ರೆಸ್ 151ರಲ್ಲಿ ಮತ್ತು ಟಿಡಿಪಿ 23ರಲ್ಲಿ ಗೆದ್ದಿತ್ತು.