ನಾನ್ ವೆಜ್ ಪಾರ್ಟಿ ಎಂದರೆ ಅಲ್ಲಿ ಮಟನ್ ಇರದಿದ್ದರೆ ಅಡುಗೆ ಸಂಪೂರ್ಣ ಎನಿಸುವುದಿಲ್ಲ. ಅದು ಪಾರ್ಟಿ ಆಗಿರಬಹುದು. ಸಂಡೇ ಆಗಿರಬಹುದು, ವೀಕೆಂಡ್ ಆಗಿರಬಹುದು. ಮಟನ್ ಮಸಾಲಾವನ್ನು ನೀವು ರೊಟ್ಟಿ, ಅನ್ನ, ರಾಗಿಮುದ್ದೆಯೊಂದಿಗೆ ಸವಿಯಬಹುದು. ಮಟನ್ ಮಸಾಲಾವನ್ನು ಒಂದೊಂದು ಕಡೆ ಒಂದೊಂದು ರೀತಿ ತಯಾರಿಸಲಾಗುತ್ತದೆ. ಇಲ್ಲಿ ಆಂಧ್ರ ಶೈಲಿಯ ಮಟನ್ ಮಸಾಲಾ ರೆಸಿಪಿಯನ್ನು ತಿಳಿಸಲಾಗಿದೆ.
ಬೇಕಾದ ಪದಾರ್ಥಗಳು
ಮಟನ್ – 1 1/2 ಕಿಲೋ
ಅರಿಶಿನ – 1/2 ಸ್ಪೂನ್
ಹಸಿಮೆಣಸಿನಕಾಯಿ – 5
ಎಣ್ಣೆ – 1 ಕಪ್
ದೊಡ್ಡ ಈರುಳ್ಳಿ – 2
ಧನಿಯಾ ಪುಡಿ – 1 1/2 ಟೇಬಲ್ ಸ್ಪೂನ್
ಮೊಸರು – 1 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 1/2
ಗರಂ ಮಸಾಲೆ ಪುಡಿ – 1 ಟೀ ಸ್ಪೂನ್
ತೆಂಗಿನ ಕಾಯಿ ತುರಿ – 1 ಕಪ್
ಗಸಗಸೆ – 1 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – 1 ಕಟ್ಟು
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲು 3-4 ಬಾರಿ ಮಟನ್ ತೊಳೆದು ನೀರು ಶೋಧಿಸಿಕೊಳ್ಳಿ. ಬಳಿಕ ತೆಂಗಿನಕಾಯಿ, ಗಸಗಸೆಯನ್ನು ಕಡಿಮೆ ಉರಿಯಲ್ಲಿ ಉರಿದು ಒಂದು ಪ್ಲೇಟ್ಗೆ ತೆಗೆದಿಡಿ ತಣ್ಣಗಾದ ನಂತರ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಕತ್ತರಿಸಿದ ಈರುಳ್ಳಿ ಸೇರಿಸಿ ಫ್ರೈ ಮಾಡಿ. ಜೊತೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿ
ಇದರೊಂದಿಗೆ ಸ್ವಲ್ಪ ಅರಿಶಿನ ಸೇರಿಸಿ 30 ಸೆಕೆಂಡ್ಗಳ ಕಾಲ ರೋಸ್ಟ್ ಮಾಡಿ ಈಗ ಮಟನ್ ತುಂಡುಗಳನ್ನು ಸೇರಿಸಿ ಹೆಚ್ಚು ಉರಿಯಲ್ಲಿ 5 ನಿಮಿಷ ಫ್ರೈ ಮಾಡಿ.
ನಂತರ ಧನಿಯಾ ಪುಡಿ ಹಸಿಮೆಣಸಿನಕಾಯಿ, ಗರಂ ಮಸಾಲೆ ಪುಡಿ ಉಪ್ಪು ಸೇರಿಸಿ ಫ್ರೈ ಮಾಡಿ. ಜೊತೆಗೆ ಗರಂಮಸಾಲೆ ಸೇರಿಸಿ ಸ್ವಲ್ಪ ಹೊತ್ತಿನ ನಂತರ ಮೊಸರು, ತೆಂಗಿನ ಪೇಸ್ಟ್ ಸೇರಿಸಿ ಮಿಕ್ಸ್ ಮಾಡಿ ಸ್ವಲ್ಪ ನೀರು ಸೇರಿಸಿ
ಬಳಿಕ ಅಗತ್ಯಕ್ಕೆ ತಕ್ಕಂತೆ ನೀರು, ಮೊಸರು ಅಡ್ಜೆಸ್ಟ್ ಮಾಡಿ ಮಟನ್ ಬೇಯುವವರೆಗೂ ಕುಕ್ ಮಾಡಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಸರ್ವ್ ಮಾಡಿ.