ಬಿಜೆಪಿ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ತೆಲುಗು ದೇಶಂ ಪಕ್ಷ ಆಂಧ್ರಪ್ರದೇಶದಲ್ಲಿ ಈ ಬಾರಿಯೂ ಮುಖಭಂಗ ಅನುಭವಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜು ಮಾಡಿವೆ.
ಪ್ರಮುಖ ಚುನಾವಣಾ ವಿಶ್ಲೇಷಕ ಸುರೇಶ್ ಕುಮಾರ್ ಅವರ ಪ್ರಕಾರ ಆಂಧ್ರದಲ್ಲಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲಿದೆ.
ಒಟ್ಟು 175 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸುರೇಶ್ ಕುಮಾರ್ ಅವರ ಪ್ರಕಾರ ವೈಎಸ್ಆರ್ ಕಾಂಗ್ರೆಸ್ 124 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿದೆ.
ಮತ್ತೋರ್ವ ಪ್ರಮುಖ ಚುನಾವಣಾ ವಿಶ್ಲೇಷಕ ಸಾಯಿಬ್ಪಾಲ್ ಪಂಡಿತ್ ಅವರ ಪ್ರಕಾರ ವೈಎಸ್ಆರ್ ಕಾಂಗ್ರೆಸ್ 121 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಟಿಡಿಪಿ ಮತ್ತು ಬಿಜೆಪಿ ಹಾಗೂ ಜನಸೇನಾ ಪಕ್ಷ 51 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್ 3 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿದೆ.
ಆಂಧ್ರಪ್ರದೇಶದಲ್ಲಿ ಮಹಿಳಾ ಮತದಾರರು ದೊಡ್ಡ ಪ್ರಮಾಣದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಪರವಾಗಿ ಮತ ಹಾಕಿದ್ದಾರೆ ಎನ್ನುವುದು ಚುನಾವಣಾ ವಿಶ್ಲೇಷಕರ ಅಂದಾಜು
ADVERTISEMENT
ADVERTISEMENT