ನಿರ್ಮಾಪಕ ಆನೇಕಲ್ ಬಾಲರಾಜ್ (58) ಅವರು ಭಾನುವಾರ ಬೆಳಿಗ್ಗೆ ಅಪಘಾತದಿಂದ ನಿಧನರಾದರು.
ಬಾಲರಾಜ್ ಅವರು ವಾಯುವಿಹಾರಕ್ಕೆ ತೆರಳುತ್ತಿದ್ದಾಗ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಅವರು ಪಾದಚಾರಿ ಮಾರ್ಗದ ಮೇಲೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ಪ್ರೇಮ್ ನಿರ್ದೇಶನದ ‘ಕರಿಯ’(2003), ಶ್ರೀನಿವಾಸ್ ಪ್ರಭು ನಿರ್ದೇಶನದ ‘ಕರಿಯ– 2’, ‘ಗಣಪ’, ‘ಬರ್ಕ್ಲಿ’ ಸೇರಿದಂತೆ ಅನೇಕ ಸಿನಿಮಾಗಳನ್ನು ಬಾಲರಾಜ್ ನಿರ್ಮಿಸಿದ್ದರು.