ಮತಾಂತರ ನಿಷೇಧಿಸಿ ಕರ್ನಾಟಕದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಈ ಮೂಲಕ ಮತಾಂತರ ನಿಷೇಧವಾಗಿದೆ.
ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ ನೀಡಿದೆ. ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು. ಅಲ್ಲಿಯವರೆಗೆ ಸುಗ್ರೀವಾಜ್ಞೆ ಜಾರಿಯಲ್ಲಿರಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.
ಈಗಾಗಲೇ ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರಗೊAಡಿದೆ. ಪರಿಷತ್ನಲ್ಲಿ ಮಸೂದೆಗೆ ಅಂಗೀಕಾರಪಡೆಯಲು ಬಿಜೆಪಿಗೆ ಬಹುಮತ ಇಲ್ಲದ ಕಾರಣ ಮೇಲ್ಮನೆಯಲ್ಲಿ ಮಸೂದೆ ಮಂಡನೆ ಆಗಿಲ್ಲ.
ಮತಾಂತರ ನಿಷೇಧ ಕಾನೂನಿನಲ್ಲಿ ಏನಿದೆ..? ಇಲ್ಲಿದೆ ಸಂಪೂರ್ಣ ವಿವರ
https://www.pratikshana.com/bommai-govt-tables-anti-conversion-bill/
ಮುಂದಿನ ವರ್ಷ ವಿಧಾನಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ಕ್ರಮ ರಾಜಕೀಯ ಸಮರಕ್ಕೆ ಕಾರಣ ಆಗಬಹುದು. ಈಗಾಗಲೇ ಹಿಜಾಬ್, ಮುಸಲ್ಮಾನರ ಅಂಗಡಿಗಳಿಗೆ ಜಾತ್ರೆ ವೇಳೆ ನಿಷೇಧ, ಆಜಾನ್ ವಿವಾದದ ನಡುವೆಯೂ ಹೊಸ ವಿವಾದ ಸೇರ್ಪಡೆ ಆಗಬಹುದು. ಈಗಾಗಲೇ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಗೋ ಹತ್ಯೆ ನಿಷೇಧಿಸಿ ಕಾಯ್ದೆ ಜಾರಿಗೊಳಿಸಿದ್ದು, ಕಾನೂನು ಸಂಬAಧ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಆಗಿದೆ.
ವಿಧಾನಮಂಡಲ ಅಧಿವೇಶನ ಇಲ್ಲದೇ ಇರುವಾಗ ಸರ್ಕಾರಕ್ಕೆ ತುರ್ತು ಎನ್ನಿಸಿದ್ದಲ್ಲಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನು ಜಾರಿಗೊಳಿಸಬಹುದು. ಆದರೆ ಸುಗ್ರೀವಾಜ್ಞೆ ಜಾರಿ ಆದ ಆರು ತಿಂಗಳೊಳಗೆ ವಿಧಾನಮಂಡಲದ ಒಪ್ಪಿಗೆ ಪಡೆಯುವುದು ಅನಿವಾರ್ಯ.