ರಾಜ್ಯದಲ್ಲಿ ಮುಂದಿನ ಚುನಾವಣಾ ತಯಾರಿಯನ್ನು ಬಿಜೆಪಿ ಈಗಾಗಲೇ ಆರಂಭಿಸಿದಂತಿದೆ. ಅದಕ್ಕನುಗುಣವಾಗಿ ಹಳೆ ಮೈಸೂರು ( Old Mysuru) ಭಾಗದಲ್ಲಿ ಬಿಜೆಪಿ ಪಕ್ಷದ ಸಂಘಟನೆಗಾಗಿ ಕೇಂದ್ರ ಸಚಿವರನ್ನು ನೇಮಕ ಮಾಡಲಾಗಿದೆ.
ಹಳೆ ಮೈಸೂರು (Old Mysuru) ಭಾಗದ ಲೋಕಸಭಾ ಕ್ಷೇತ್ರಗಳಿಗೆ ಕೇಂದ್ರ ಸಚಿವರನ್ನು ಉಸ್ತುವಾರಿಗಳನ್ನಾಗಿ ಬಿಜೆಪಿ ಹೈಕಮಾಂಡ್ ನೇಮಕ ಮಾಡಿದೆ.
ನೇಮಕವಾದ ಕೇಂದ್ರ ಸಚಿವರ ಪಟ್ಟಿ :
- ಮಂಡ್ಯ ಲೋಕಸಭಾ ಕ್ಷೇತ್ರ – ಗಜೇಂದ್ರ ಸಿಂಗ್ ಶೇಖಾವತ್
- ಹಾಸನ ಲೋಕಸಭಾ ಕ್ಷೇತ್ರ – ಕೃಷ್ಣ ಪಾಲ್ ಗುರ್ಜರ್
- ಬೆಂಗಳೂರು ಗ್ರಾಮಾಂತರ – ರವಿಶಂಕರ್
ನೇಮಕವಾದ ಕೇಂದ್ರ ಸಚಿವರಿಗೆ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ನೀಡಿದೆ.
ಇದನ್ನೂ ಓದಿ : GST: ಮನೆ ಬಾಡಿಗೆಗೂ ಜಿಎಸ್ಟಿ..!
ಬೂತ್ಗಳನ್ನು A,B,C ಎಂದು 3 ವಿಧಗಳಾಗಿ ಬಿಜೆಪಿ ವಿಂಗಡಿಸಿದೆ. A ಎಂದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆಂಬ ವಿಶ್ವಾಸ. B ಎಂದರೆ ಬಿಜೆಪಿಗೆ ಮತಗಳು ಬರುತ್ತವೆ ಆದರೆ, ಅಭ್ಯರ್ಥಿಗಳು ಇಲ್ಲ ಎನ್ನುವುದು. ಮತ್ತು C ಎಂದರೆ ಇಲ್ಲಿ ಬೇರೆ ಪಕ್ಷಗಳದೇ ಮೇಲುಗೈ ಎನ್ನುವುದು.
ಈ ಆಧಾರದ ಮೇಲೆ ಬಿಜೆಪಿ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಕೈ ಹಾಕಿದೆ.
(ನಟ ಗಣೇಶ್, ದಿಗಂತ್, ಪವನ್ಕುಮಾರ್ ನಟನೆಯ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರದ ಪ್ರೇಕ್ಷಕರ ವಿಮರ್ಶೆ)