ಅತೀ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್ ಎಂಬ ಹೆಗ್ಗಳಿಕೆಯ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಈ ನಿವೃತ್ತಿ ಈ ಕ್ಷಣದಿಂದಲೇ ಅನ್ವಯವಾಗಲಿದೆ.
ಗಾಬಾದಲ್ಲಿ ನಡೆದ ಮೂರನೇ ಟೆಸ್ಟ್ ಡ್ರಾದಲ್ಲಿ ಕೊನೆಯಾದ ಬೆನ್ನಲ್ಲೇ ಅಶ್ವಿನ್ ಅವರು ನಿವೃತ್ತಿ ಘೋಷಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಮುಗಿದ ಮೂರು ಟೆಸ್ಟ್ ಪಂದ್ಯಗಳ ಪೈಕಿ ಅಡಿಲೇಡ್ನಲ್ಲಿ ನಡೆದಿದ್ದ 2ನೇ ಟೆಸ್ಟ್ ಪಂದ್ಯದಲ್ಲಿ ಮಾತ್ರ ಟೀಂ ಇಂಡಿಯಾ ಅಶ್ವಿನ್ ಅವರನ್ನು ಕಣಕ್ಕಿಳಿಸಿತ್ತು. ಆ ಪಂದ್ಯದಲ್ಲಿ 53 ರನ್ಗೆ 1 ವಿಕೆಟ್ ಪಡೆದಿದ್ದರು.
106 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಶ್ವಿನ್ ಅವರು 24 ವಿಕೆಟ್ಗಳ ಸರಾಸರಿಯಲ್ಲಿ 537 ವಿಕೆಟ್ಗಳನ್ನು ಪಡೆದಿದ್ದಾರೆ. ಅನಿಲ್ ಕುಂಬ್ಳೆ ಅವರು 132 ಟೆಸ್ಟ್ ಪಂದ್ಯಗಳಿಂದ 619 ವಿಕೆಟ್ಗಳನ್ನು ಪಡೆದಿದ್ದರು.
ಅಶ್ವಿನ್ ಆಡಿದ್ದ ಕಡೆಯ ಟೆಸ್ಟ್ ಸರಣಿ ಎಂದರೆ ನ್ಯೂಜಿಲೆಂಡ್ ವಿರುದ್ಧದ ಸರಣಿ. 3 ಪಂದ್ಯಗಳ ಆ ಸರಣಿಯಲ್ಲಿ ಅಶ್ವಿನ್ ಕೇವಲ 9 ವಿಕೆಟ್ ಪಡೆದಿದ್ದರು.
ಟೆಸ್ಟ್ ಕ್ರಿಕೆಟ್ನಲ್ಲಿ 3,503 ರನ್ ಗಳಿಸಿರುವ ಅಶ್ವಿನ್ 6 ಶತಕ ಮತ್ತು 14 ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ 300 ವಿಕೆಟ್ ಮತ್ತು 3 ಸಾವಿರ ರನ್ ಗಳಿಸಿರುವ ಅಲ್ರೌಂಡರ್ಗಳ ಪೈಕಿ ಓರ್ವ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.
ADVERTISEMENT
ADVERTISEMENT