ದುಬೈ: ಏಷ್ಯ ಕಪ್ ಫೈನಲ್ ತಲುಪಲು ಗೆಲ್ಲಲೇ ಬೇಕಾಗಿದ್ದ ಶ್ರೀಲಂಕಾ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದೆ.
ಸೂಪರ್ 4 ಭಾಗವಾಗಿ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ಪಡೆ 6 ವಿಕೆಟ್ ಅಂತರದಲ್ಲಿ ಗೆಲುವು ಸಾಧಿಸಿದೆ.
ಈ ಸೋಲಿನೊಂದಿಗೆ ರೋಹಿತ್ ಪಡೆ ಫೈನಲ್ ತಲುಪುವ ಹಾದಿ ಕಠಿಣವಾಗಿದೆ.
ಸಂಕ್ಷಿಪ್ತ ಸ್ಕೋರ್ ವಿವರ :
* ಟೀಮ್ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್
* ರೋಹಿತ್ ಶರ್ಮ 41 ಎಸೆತಗಳಲ್ಲಿ 72 ರನ್
* ಶ್ರೀಲಂಕಾ 19.5ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 174 ರನ್.
* ಸತತವಾಗಿ ಎರಡು ಪಂದ್ಯ ಗೆದ್ದ ಲಂಕಾ ಫೈನಲ್ ಬೆರ್ತ್ ಕನ್ಫರ್ಮ್ ಮಾಡಿಕೊಂಡಿದೆ.
* ಕೊನೆಯ ಓವರ್ ನಲ್ಲಿ ಲಂಕಾಗೆ 7 ರನ್ ಬೇಕಿತ್ತು. ಕೊನೆಯ ಎರಡು ಎಸೆತಗಳಲ್ಲಿ ಎರಡು ರನ್ ಬೇಕಿತ್ತು.
* ಐದನೇ ಎಸೆತದಲ್ಲಿಯೇ ಓವರ್ ಥ್ರೂ ಕಾರಣ ಎರಡು ರನ್ ಲಭಿಸಿ ಲಂಕಾ ಗೆಲುವಿನ ನಗಾರಿ ಬಾರಿಸಿತು.
* ನಿಸ್ಸಂಕ -52, ಮೆಂಡೀಸ್ 57, ಕೊನೆಯಲ್ಲಿ ಶಾನಕ 33, ಬಾನುಕಾ ಅಜೇಯ 25 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
* ಗುರುವಾರ ಟೀಮ್ ಇಂಡಿಯಾ ಅಫ್ಘನ್ ತಂಡವನ್ನು ಎದುರಿಸಲಿದೆ.
ADVERTISEMENT
ADVERTISEMENT