ಅಸ್ಸಾಂ ರಾಜ್ಯದ ಗೋಪಾಲಪುರ ಜಿಲ್ಲೆಯ ದರೋಗರ್ ಅಲ್ಗಾ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಖಾಸಗಿ ಮದರಸಾವೊಂದನ್ನು ಅಲ್ಲಿನ ಗ್ರಾಮಸ್ಥರೇ ಧ್ವಂಸಗೊಳಿಸಿರುವ(Madrasah destroyed) ಘಟನೆ ವರದಿಯಾಗಿದೆ.
ಅಸ್ಸಾಂ ಪೊಲೀಸರಿಗೆ ಬೇಕಾಗಿದ್ದ ಬಾಂಗ್ಲಾದೇಶ ಮೂಲದ ಅಮೀನುಲ್ ಇಸ್ಲಾಮ್ ಅಲಿಯಾಸ್ ಉಸ್ಮಾನ್ ಮತ್ತು ಜಹಾಂಗೀರ್ ಆಲೊಮ್ ಎನ್ನುವ ಇಬ್ಬರು ಈ ಮದರಸಾದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಪರಾರಿಯಾಗಿದ್ದು, ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶ ಮೂಲದ ಉಗ್ರರಿಗೆ ಮದರಸಾದಲ್ಲಿ (Madrasah destroyed) ಕೆಲಸ ನೀಡಿದ್ದಕ್ಕೆ ಗ್ರಾಮಸ್ಥರು ಕುಪಿತಗೊಂಡಿದ್ದರು ಎನ್ನಲಾಗಿದೆ. ಅಲ್ಲದೇ, ಈ ಮದರಸಾ ಅಕ್ರಮ ಕಟ್ಟಡ ಎಂಬ ಮಾಹಿತಿ ಹೊರಬಿದ್ದ ಬೆನ್ನಲ್ಲೇ, ಗ್ರಾಮಸ್ಥರು ಮದರಸಾವನ್ನು ನೆಲಸಮ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ : ಮದರಸಾಗಳಲ್ಲಿ ತ್ರಿವರ್ಣ ಧ್ವಜ ಹಾರಲೇಬೇಕು – ಸರ್ಕಾರದ ಆದೇಶ
ಅಲ್ ಕೈದಾ ಉಗ್ರಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ನಿಷೇಧಿತ ಉಗ್ರಸಂಘಟನೆ ಅನ್ಸಾರುಲ್ಲಾ ಬಾಂಗ್ಲಾ ಟೀಮ್ನ ಸದಸ್ಯರಾಗಿದ್ದ ಇಬ್ಬರು ಬಾಂಗ್ಲಾದೇಶಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕಳೆದ ಆಗಸ್ಟ್ನಲ್ಲಿ ಮೋರಿಗಾನ್, ಬರ್ಪೆಟಾ ಮತ್ತು ಬೊಂಗೈಗಾನ್ ಜಿಲ್ಲೆಯಲ್ಲಿ ನಿರ್ಮಿಸಲಾಗಿದ್ದ ಮದರಸಾಗಳನ್ನು ಅಲ್ಲಿನ ಆಡಳಿತವೇ ನೆಲಸಮ ಮಾಡಿತ್ತು. ನಿಯಮ ಉಲ್ಲಂಘಿಸಿ ಖಾಸಗಿ ಮದರಸಾ ನಿರ್ಮಿಸಲಾಗಿದೆ ಎಂದು ಪೊಲೀಸರು ಮತ್ತು ಸ್ಥಳೀಯಾಡಳಿತ ಹೇಳಿತ್ತು. ಇದನ್ನೂ ಓದಿ : ರಾಜ್ಯದಲ್ಲಿ ಮದರಸಾ ಬ್ಯಾನ್ ಮಾಡಬೇಕು, ಅಲ್ಲಿ ದೇಶದ್ರೋಹದ ಪಾಠ ಮಾಡಲಾಗುತ್ತದೆ : ಶಾಸಕ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ