ಪೊಲೀಸ್ ಅಧಿಕಾರಿ ಆಗಿರುವ ವಧು ತನ್ನೊಂದಿಗೆ ನಿಶ್ಚಿತಾರ್ಥವಾಗಿದ್ದ ವರನನ್ನೇ ಬಂಧಿಸಿದ್ದಾಳೆ.
ಸರ್ಕಾರಿ ಸ್ವಾಮ್ಯದ ಒಎನ್ಜಿಸಿಯಲ್ಲಿ ಕೆಲಸ ಕೊಡಿಸುವುದಾಗಿ ಹಲವರಿಂದ ದುಡ್ಡು ಪಡೆದಿದ್ದ ರಾಣಾ ಪೊಗಾಗ್ ಎಂಬಾತ ವಂಚಿಸಿದ್ದ. ಅಸ್ಸಾಂ ರಾಜ್ಯದ ನಗೌವ್ ಜಿಲ್ಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿರುವ ಜುನ್ಮೋನಿ ರಾಭಾಗೆ ವಂಚನೆ ಸಂಬAಧ ಮೂವರು ಬಂದು ದೂರು ನೀಡಿದ್ದರು. ಈ ದೂರನ್ನು ಆಧರಿಸಿ ತನ್ನನ್ನು ಮದ್ವೆ ಆಗಬೇಕಿದ್ದ ರಾಣಾನನ್ನೇ ಪೊಲೀಸ್ ಅಧಿಕಾರಿ ಜುನ್ಮೋನಿ ಬಂಧಿಸಿದ್ದಾರೆ.
`ತಾನು ಒಎನ್ಜಿಸಿಯಲ್ಲಿ ಕೆಲಸ ಮಾಡುತ್ತಿರುವುದಾಗಿಯೂ ಕೆಲಸ ತೆಗೆಸಿಕೊಡುವುದಾಗಿಯೂ ಹಲವರಿಗೆ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದ. ಈ ಬಗ್ಗೆ ನನಗೆ ಮೂವರು ಬಂದು ದೂರು ನೀಡಿದ್ದರು. ಆತ ಎಂಥ ದೊಡ್ಡ ಮೋಸಗಾರ ಎಂದು ತಿಳಿಸಿದರು. ನನ್ನ ಕಣ್ಣು ತೆರೆಸಿದರು’ ಎಂದು ಸಬ್ ಇನ್ಸ್ಪೆಕ್ಟರ್ ಜುನ್ಮೋನಿ ರಾಭಾ ಹೇಳಿದ್ದಾರೆ.
ತನ್ನನ್ನು ತಾನು ಮದುವೆ ಆಗಬೇಕಿದ್ದ ಸಬ್ಇನ್ಸ್ಪೆಕ್ಟರ್ ಜುನ್ಮೋನಿ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂದು ಪರಿಚಯ ಮಾಡಿಕೊಳ್ತಿದ್ದ. ಕಳೆದ ವರ್ಷ ನವೆಂಬರ್ನಲ್ಲಿ ಇವರಿಬ್ಬರಿಗೆ ನಿಶ್ವಿತಾರ್ಥ ಆಗಿತ್ತು ಮತ್ತು ಇದೇ ನವೆಂಬರ್ನಲ್ಲಿ ಮದುವೆ ಆಗ್ಬೇಕಿತ್ತು.