ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಜೈಜಗದೀಶ್ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ.
ಈ ಪ್ರಕರಣ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಗೆ ಹಾಜರಾಗಿದ್ದ ಜೈ ಜಗದೀಶ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ದೂರುದಾರ ವ್ಯಕ್ತಿಗೆ ಕ್ಷಮೆಯಾಚಿಸಿ ಪತ್ರ ಬರೆದುಕೊಟ್ಟಿದ್ದಾರೆ ಎನ್ನಲಾಗಿದೆ.
ಕಳೆದ ಭಾನುವಾರ ಕಾರಿನ ಮೇಲೆ ಬಸ್ಸಿನಲ್ಲಿದ್ದವರು ಬಾಟಲಿ ಎಸೆದಿರುವುದಕ್ಕೆ ನಟ ಜೈಜಗದೀಶ್ ಕೋಪಗೊಂಡಿದ್ದರು. ಬಸ್ಸಿನಿಂದ ಇಳಿದ ವ್ಯಕ್ತಿ ತಪ್ಪು ಮಾಡಿರುವುದಾಗಿ ರಂಪಾಟ ನಡೆಸಿ ಕಪಾಳಕ್ಕೆ ಹೊಡೆದು, ಕೈ ಕಚ್ಚಿ, ಬಟ್ಟೆ ಹರಿದು ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿ ದೂರು ದಾಖಲಿಸಿದ್ದರು.
ನಟ ಜೈ ಜಗದೀಶ್ ಅವರ ತಪ್ಪೊಪ್ಪಿಗೆಯೊಂದಿಗೆ ಪ್ರಕರಣ ಸುಖಾಂತ್ಯ ಕಂಡಿದೆ.