ಅಮೆರಿಕಾದ ಅಧ್ಯಕ್ಷೀಯ ಭವನ ಶ್ವೇತಸೌಧಕ್ಕೆ ಟ್ರಕ್ ನುಗ್ಗಿಸಲು ನೋಡಿದ 19 ವರ್ಷದ ಯುವಕನನ್ನು ಅಲ್ಲಿನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅಲ್ಲಿನ ಸ್ಥಳೀಯ ಕಾಲಮಾನದ ಪ್ರಕಾರ ಸೋಮವಾರ ರಾತ್ರಿ 10 ಗಂಟೆ ಸಮಯದಲ್ಲಿ ಒಮದು ಭಾರೀ ಟ್ರಕ್ ಚಲಾಯಿಸಿಕೊಂಡು ಬಂದ ಆಂಧ್ರ ಮೂಲದ, 19 ವರ್ಷದ ಯುವಕ ಸಾಯಿ ವರ್ಷಿತ್ ಕಂದುಲ, ವೈಟ್ ಹೌಸ್ ಉತ್ತರ ದಿಕ್ಕಿನಲ್ಲಿ ಭದ್ರತಾ ದೃಷ್ಟಿಯಿಂದ ಅಳವಡಿಸಿದ್ದ ಟ್ರಾಫಿಕ್ ಬ್ಯಾರಿಕೇಡ್ಗಳನ್ನು ಡಿಕ್ಕಿ ಹೊಡೆದು ಮುಂದಕ್ಕೆ ನುಗ್ಗಲು ಪ್ರಯತ್ನಿಸಿದ್ದಾರೆ. ಕೂಡಲೇ ಈ ಪ್ರಯತ್ನವನ್ನು ಭದ್ರತಾ ಸಿಬ್ಬಂದಿ ವಿಫಲಗೊಳಿಸಿದ್ದಾರೆ.
ಟ್ರಕ್ ಮುಂಭಾಗದಲ್ಲಿ ನಾಝಿ ಪತಾಕೆ ಅಳವಡಿಸಿರುವುದನ್ನು ಭದ್ರತಾ ಸಿಬ್ಬಂದಿ ಗುರುತಿಸಿದ್ದಾರೆ. ಏಕೆ ಹೀಗೆ.. ನಿಮ್ಮ ಉದ್ದೇಶ ಏನೆಂದು ಪ್ರಶ್ನೆ ಮಾಡಿದಾಗ, ನನ್ನ ಟಾರ್ಗೆಟ್ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಎಂದು ಸಾಯಿ ವರ್ಷಿತ್ ಕಂದುಲ ಉತ್ತರ ನೀಡಿದ್ದಾನೆ.
ಸಾಯಿ ವರ್ಷಿತ್ ಕಂದುಲ ವಿರುದ್ಧ ಶಸ್ತ್ರಾಸ್ತ್ರ ಬಳಕೆ, ನಿರ್ಲಕ್ಷ್ಯದಿಂದ ವಾಹನ ಚಾಲನೆ, ಅಧ್ಯಕ್ಷರ ಕೊಲೆಯತ್ನ, ಸಾರ್ವಜನಿಕ ಆಸ್ತಿಗೆ ಹಾನಿ ಸೇರಿ ಹಲವು ಆರೋಪಗಳನ್ನು ಹೊರೆಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.ಮಂಗಳವಾರ ಬೆಳಗ್ಗೆ ಈ ವಿಚಾರವನ್ನು ಅಧ್ಯಕ್ಷ ಜೋ ಬೈಡನ್ ಗಮನಕ್ಕೆ ಭದ್ರತಾ ಸಿಬ್ಬಂದಿ ತಂದಿದ್ದಾರೆ.
ಅಮೆರಿಕಾದ ಚೆಸ್ಟ್ಫೀಲ್ಡ್ ನಿವಾಸಿಯಾದ ಸಾಯಿ ವರ್ಷಿತ್ ಕಂದುಲ 2022ರಲ್ಲಿ ಮಾರ್ಕ್ವೆಟ್ ಸೀನಿಯರ್ ಹೈಸ್ಕೂಲ್ನಿಂದ ಗ್ರ್ಯಾಡ್ಯೂಯೇಟ್ ಆಗಿರುವುದು ತಿಳಿದುಬಂದಿದೆ. ಸೋಷಿಯಲ್ ಮೀಡಿಯಾ ಮೂಲಕ ಹೆಚ್ಚಿನ ಮಾಹಿತಿಯನ್ನು ಭದ್ರತಾ ಸಿಬ್ಬಂದಿ ಸಂಗ್ರಹಿಸುತ್ತಿದ್ದಾರೆ.
ADVERTISEMENT
ADVERTISEMENT