ಮೆಲ್ಬೋರ್ನ್ನಲ್ಲಿ ಆರಂಭವಾಗಿರುವ ನಾಲ್ಕನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಮೊದಲ ದಿನವೇ ಆಸ್ಟ್ರೇಲಿಯಾ ಭಾರೀ ಮೊತ್ತವನ್ನು ಕಲೆಹಾಕಿದೆ.
ಮೊದಲ ದಿನದ ಆಟದ ಅಂತ್ಯಕ್ಕೆ 86 ಓವರ್ಗಳಲ್ಲಿ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 311 ರನ್ ಗಳಿಸಿದೆ. ಪ್ರತಿ ಓವರ್ಗೆ 3.61 ಸರಾಸರಿಯಲ್ಲಿ ಆಸ್ಟ್ರೇಲಿಯಾ ರನ್ ಕಲೆ ಹಾಕಿದೆ.
ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ 68 ರನ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ 8 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ತು.
ಆಸ್ಟ್ರೇಲಿಯಾ ಪರ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ 19 ವರ್ಷದ ಹರೆಯದ ಸ್ಯಾಮ್ ಕಾನ್ಸ್ಟಾಸ್ ಆರಂಭದಲ್ಲೇ ಅಬ್ಬರಿಸಿ ಆಸ್ಟ್ರೇಲಿಯಾದ ಉತ್ತಮ ಮೊತ್ತ ಕಲೆಹಾಕುವುದಕ್ಕೆ ನೆರವಾದ್ರು.
ಸ್ಯಾಮ್ ಕಾನ್ಸ್ಟಾಸ್ 65 ಎಸೆತಗಳಲ್ಲಿ 60 ರನ್ ಗಳಿಸಿದರು. ಇದರಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಿತ್ತು. ಉಸ್ಮಾನ್ ಖ್ವಾಜಾ 57 ರನ್, ಮಾರ್ನಸ್ ಲಾಬುಸ್ಚಗ್ನೆ 72 ರನ್ ಗಳಿಸಿದರು. ಏಳನೇ ವಿಕೆಟ್ಗೆ ಜೊತೆಯಾದ ಅಲೆಕ್ಸ್ ಕ್ಯಾರಿ 31 ರನ್ ಗಳಿಸಿದರು.
ಭಾರತದ ಪರ ಜಸ್ಪ್ರೀತ್ ಬೂಮ್ರಾ 3 ವಿಕೆಟ್ ಕಬಳಿಸಿದರು. ಆಕಾಶ್ ದೀಪ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಕಬಳಿಸಿದರು.
ADVERTISEMENT
ADVERTISEMENT