ತಿರುಪತಿ : ಅಯೋಧ್ಯೆಯಲ್ಲಿ (Ayodhya) ರಾಮಮಂದಿರ (Ramamandir) ಪ್ರತಿಷ್ಠಾಪನಾ ಕಾರ್ಯಕ್ಕೆ ಕೇವಲ 48 ತಾಸುಗಳಷ್ಟೇ ಉಳಿದಿವೆ. ಜ. 22 ರ ಸೋಮವಾರದಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನಾ ಮುಹೂರ್ತಕ್ಕೆ ತಿರುಪತಿಯ ವೆಂಕಟೇಶ್ವರ ದೇಗುಲದಿಂದ (Tirupati Venkateshwara temple) ಲಾಡು ಪ್ರಸಾದವನ್ನು (Laddu prasad) ಕಳುಹಿಸಿಕೊಡಲಾಗಿದೆ.
ಬರೋಬ್ಬರಿ ಒಂದು ಲಕ್ಷ ಲಾಡು ಪ್ರಸಾದವನ್ನು ತಿರುಪತಿಯಿಂದ ಅಯೋಧ್ಯೆಗೆ ಕಳುಹಿಸಿ ಕೊಡಲಾಗಿದ್ದು, ಈಗಾಗಲೇ ಸಿದ್ದಗೊಂಡಿರುವ ತಾಜಾ ಲಾಡುಗಳನ್ನು ಟ್ರಕ್ ಗಳಲ್ಲಿ ರವಾನಿಸಲಾಗುತ್ತಿದೆ. ಅಯೋಧ್ಯೆಯಲ್ಲಿ ಭಕ್ತಾದಿಗಳಿಗೆ ವಿತರಿಸಲು ತಿರುಪತಿ ತಿರುಮಲ ದೇವಾಲಯ ಟ್ರಸ್ಟ್ ಈ ಕಾರ್ಯಕ್ಕೆ ಮುಂದಾಗಿದೆ.
ಇದೇ ವೇಳೆ, ಹೈದರಾಬಾದ್ ಮೂಲದ ಬಿಜೆಪಿ ನಾಯಕರೊಬ್ಬರು ಅಯೋಧ್ಯೆಗೆ ಕಳುಹಿಸಿದ್ದ 1265 ಕೆಜಿ ತೂಕದ ಬೃಹತ್ ಲಡ್ಡು ಅಯೋಧ್ಯೆ ತಲುಪಿದೆ. ನಾಲ್ಕು ದಿನಗಳ ಹಿಂದಷ್ಟೇ ಜೈಶ್ರೀರಾಮ್ ಎಂಬ ಬರಹವುಳ್ಳ ಈ ಬೃಹತ್ ಲಡ್ಡುವನ್ನು ಅಯೋಧ್ಯೆಗೆ ಕಳಿಸಿದ್ದರು.
ಚಂಡೀಘರದಿಂದ 150 ಕ್ವಿಂಟಾಲ್ ಲಡ್ಡುವನ್ನು ತಯಾರಿಸಿ ಕಳಿಸಲಾಗುತ್ತಿದ್ದು, ಈ ಲಡ್ಡು ನಾಳೆ ಅಯೋಧ್ಯೆ ತಲುಪಲಿದೆ.