ಕಾಶ್ಮೀರಿ ಪಂಡಿತರ ನರಮೇಧ ಕುರಿತ ಕಾಶ್ಮೀರಿ ಫೈಲ್ಸ್ ಸಿನಿಮಾಕ್ಕೆ ತೆರಿಗೆ ವಿನಾಯ್ತಿ ನೀಡುವ ಬದಲು ಅದನ್ನು ಯೂ ಟ್ಯೂಬ್ನಲ್ಲಿ ಹಾಕಿದರೆ ಎಲ್ಲರೂ ಫ್ರೀಯಾಗಿಯೇ ನೋಡಬಹುದಲ್ವಾ ಎಂದು ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ನಾಯಕರಿಗೆ ಮೊಟಕಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಬಿಜೆಪಿ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ತಿರುಗೇಟು ನೀಡಿದ್ದಾರೆ.
೨೦೧೬ರಲ್ಲಿ ನಟಿ ಸ್ವರ ಭಾಸ್ಕರ ಮತ್ತು ೨೦೧೯ರಲ್ಲಿ ನಟಿ ತಾಪ್ಸಿ ಪನ್ನು ನಟಿಸಿದ್ದ ಸಿನಿಮಾಕ್ಕೆ ದೆಹಲಿ ಸಿಎಂ ಕೇಜ್ರಿವಾಲ್ ತೆರಿಗೆ ವಿನಾಯ್ತಿ ಘೋಷಿಸಿ ಮಾಡಿದ್ದ ಟ್ವೀಟ್ನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ `ವಿವೇಕ್ ಅಗ್ನಿಹೋತ್ರಿ ಅವರ ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ಯೂಟ್ಯೂಬ್ನಲ್ಲಿ ಅಪ್ ಲೋಡ್ ಮಾಡುವಂತೆ ಹೇಳಿದ್ದಾರೆ. ತೆರಿಗೆ ವಿನಾಯ್ತಿ ಯಾಕೆಂದು ಕೇಳಿದ್ದಾರೆ. ಇದು ಬೇರೆ ಸಿನಿಮಾಗಳಿಗೆ ಅನ್ವಯ ಆಗಲ್ಲ. ಜಾಹೀರಾತು ಸಿಎಂಗೆ ನಾಚಿಕೆ ಆಗ್ಬೇಕು’ ಎಂದು ಬಿ ಎಲ್ ಸಂತೋಷ್ ತಿರುಗೇಟು ನೀಡಿದ್ದಾರೆ.
Delhi CM @ArvindKejriwal asks @vivekagnihotri to upload #KashmirFiles on YouTube .. Why tax concessions ..? That doesn’t applies for other films .. Shame on you Ad CM …. Shame . pic.twitter.com/AgJFkh8orx
— B L Santhosh ( Modi Ka Parivar ) (@blsanthosh) March 24, 2022