ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ನೀಡಿದ 2 ಲಕ್ಷ ಪರಿಹಾರದ ಹಣವನ್ನು ವಾಪಾಸು ಸಿದ್ದರಾಮಯ್ಯನವರಿಗೆ ಮುಸ್ಲಿಂ ಮಹಿಳೆಯೊಬ್ಬರು ಎಸೆದಿರುವ ಘಟನೆ ನಡೆದಿದೆ.
ಬಾಗಲಕೋಟೆ ಪ್ರವಾಸದಲ್ಲಿರುವ ಸಿದ್ದರಾಮಯ್ಯನವರು ಕೆರೂರು ಕೋಮು ಘರ್ಷಣೆಯಲ್ಲಿನ ಗಾಯಾಳುಗಳಿಗೆ ಸಾಂತ್ವ ನ ಹೇಳಲು ಹೋಗಿದ್ದರು. ಈ ವೇಳೆ ಸಿದ್ದರಾಮಯ್ಯನವರು ಮಹಿಳೆಯೊಬ್ಬರಿಗೆ 2 ಲಕ್ಷ ಪರಿಹಾರದ ಹಣ ನೀಡಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಮಹಿಳೆ ಆ ದುಡ್ಡನ್ನ ಸಿದ್ದರಾಮಯ್ಯನವರ ಕಾರಿನೊಳಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮಗೆ ದುಡ್ಡ ಬೇಡ ಶಾಂತಿ ಬೇಕು ಎಂದಿರುವ ಮಹಿಳೆ ಸಿದ್ದರಾಮಯ್ಯನವರ ಕಾರಿನೊಳಗೆ ವಾಪಾಸು ದುಡ್ಡು ಎಸೆದಿದ್ದಾರೆ.
ಕೆರೂರು ಘರ್ಷಣೆಯಲ್ಲಿ ಗಾಯಗೊಂಡಿದ್ದ ಮೊಹಮ್ಮದ್ ಹನೀಪ್, ದಾವಲ್ ಮಲೀಕ್, ರಾಜೆಸಾಬ್ ಹಾಗೂ ರಪೀಕ್ ಅವರ ಆರೋಗ್ಯವನ್ನು ಸಿದ್ದರಾಮಯ್ಯನವರು ವಿಚಾರಿಸಿದ್ದಾರೆ.
ನಜ್ಮಾ ಎಂಬ ಮಹಿಳೆ ಸಿದ್ದರಾಮಯ್ಯನವರಿಂದ ಹಣ ತೆಗೆದುಕೊಳ್ಳಲು ನಿರಾಕರಿಸಿ ವಾಪಾಸು ಎಸೆದಿದ್ದಾರೆ.