ಹಲವು ದಿನಗಳಿಂದ ಮರೆಯಾಗಿದ್ದ ಹಿಂದೂಯೇತರ ವ್ಯಾಪಾರಿಗಳಿಗೆ ಹಿಂದೂ ದೇವಸ್ಥಾನದ ಆವರಣದೊಳಗೆ ನಿರ್ಬಂಧದ ಅಭಿಯಾನ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಇದೀಗ, ಹಾಸನದ ಅರಸೀಕೆರೆಯ ಮಾಲೇಕಲ್ಲು ತಿರುಪತಿ ದೇವಸ್ಥಾನದಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿ ದೇವಸ್ಥಾನ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ಮಾಲೇಕಲ್ಲು ತಿರುಪತಿ ದೇವಸ್ಥಾನದ ನೂರು ಮೀಟರ್ ಅಂತರದಲ್ಲಿ ಹಿಂದೂಯೇತರರಿಗೆ ವ್ಯಾಪಾರ-ವಹಿವಾಟು ಮಾಡಲು ಅವಕಾಶವಿಲ್ಲ ಎಂಬ ಬೋರ್ಡ್ ಹಾಕಲಾಗಿದೆ.
ನಾಳೆಯಿಂದ ಅರಸೀಕೆರೆಯಲ್ಲಿ ಮಾಲೇಕಲ್ಲು ತಿರುಪತಿ ಜಾತ್ರೆ ನಡೆಯಲಿದೆ. ಮಾಲೇಕಲ್ಲು ತಿರುಪತಿ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ನೂರು ಮೀಟರ್ ಅಂತರದಲ್ಲಿ ಹಿಂದೂಯೇತರರಿಗೆ ವ್ಯಾಪಾರ-ವಹಿವಾಟು ಮಾಡಲು ಅವಕಾಶವಿಲ್ಲ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹೆಸರಲ್ಲಿ ಬೋರ್ಡ್ ಹಾಕಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯ ಬೋರ್ಡ್ನಲ್ಲಿ ಇದನ್ನು ಬರೆದು ಹಾಕಲಾಗಿದೆ. ಈ ಆದೇಶಕ್ಕೆ ಕೆಲವೊಂದಿಷ್ಟ ಜನ ಸ್ಥಳೀಯರಿಂದಲೇ ಆಕ್ರೋಶ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.