ಎಲ್ಲಾ ಋತು ಹಾಗೂ ತುಂಬಾ ಅಗ್ಗದಲ್ಲಿ ಸಿಗುವಂತಹ ಹಣ್ಣೆಂದರೆ ಅದು ಬಾಳೆಹಣ್ಣು. ಪೋಷಕಾಂಶಗಳು ಸಮೃದ್ಧವಾಗಿರುವಂತಹ ಬಾಳೆಹಣ್ಣು ಹೆಚ್ಚಿನವರಿಗೆ ತುಂಬಾ ಪ್ರಿಯ. ಇದನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಸಿದರೆ ದೇಹಕ್ಕೆ ಹಲವಾರು ರೀತಿಯ ಲಾಭ ಸಿಗುವುದು. ನಾವು ಬಾಳೆಹಣ್ಣನ್ನು ಬಳಕೆ ಮಾಡಿದರೆ, ಅದು ದೇಹಕ್ಕೆ ಬೇಕಾಗುವಂತಹ ವಿಟಮಿನ್ ಹಾಗೂ ಖನಿಜಾಂಶಗಳನ್ನು ನೀಡುತ್ತದೆ.
ಬಾಳೆಹಣ್ಣನ್ನು ಸ್ಮೂಥಿ ಮಾಡಿಕೊಂಡು ಕೂಡ ಸೇವಿಸಬಹುದು. ಅದೇ ರೀತಿಯಲ್ಲಿ ಇದರ ಚಿಪ್ಸ್ ಇತ್ಯಾದಿ ಕೂಡ ಮಾಡುವರು. ಈ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹಕ್ಕೆ ಹಠಾತ್ ಶಕ್ತಿ ನೀಡಬೇಕಾದರೆ ಒಂದು ಬಾಳೆಹಣ್ಣು ಸೇವನೆ ಮಾಡಿದರೆ ಸಾಕು. ಪ್ರತಿನಿತ್ಯವೂ ಬಾಳೆಹಣ್ಣು ತಿಂದರೆ ಏನೆಲ್ಲಾ ಲಾಭಗಳು ಆಗಲಿವೆ ಎಂಬ ಮಾಹಿತಿ ಇಲ್ಲಿದೆ.
ಪ್ರತಿನಿತ್ಯವೂ ಒಂದು ಬಾಳೆಹಣ್ಣು ತಿಂದರೆ ಅದರಿಂದ ಹೃದಯ ಸಂಬಂಧಿ ಕಾಯಿಲೆ ಮತ್ತು ಪಾರ್ಶ್ವವಾಯುವನ್ನು ತಡೆಯಬಹುದಾಗಿದ್ದು, ಬಾಳೆಹಣ್ಣಿನಲ್ಲಿ ಇರುವಂತಹ ಪೊಟಾಶಿಯಂ ಅಂಶವು ರಕ್ತ ಸಂಚಾರ ಹಾಗೂ ಅಪಧಮನಿ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಪ್ರತಿನಿತ್ಯ ಆಹಾರ ಕ್ರಮದಲ್ಲಿ 1540 ಮಿ.ಗ್ರಾಂ.ನಷ್ಟು ಆಹಾರದ ಪೊಟಾಶಿಯಂನ್ನು ಹೆಚ್ಚಿಸಿದರೆ ಅದರಿಂದ ಶೇ.21ರಷ್ಟು ಪಾರ್ಶ್ವವಾಯುವಿನ ಸಮಸ್ಯೆಯನ್ನು ಕಡಿಮೆ ಮಾಡಬಹುದು ಎಂದು ಕಂಡುಕೊಳ್ಳಲಾಗಿದೆ.
ಪ್ರತಿನಿತ್ಯ ಬಾಳೆಹಣ್ಣು ಸೇವನೆಯಿಂದ ಸಿಗುವ ಲಾಭಗಳು
ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಇದ್ದು, ಇದು ದೇಹದಲ್ಲಿ ಕೆಂಪು ರಕ್ತ ಕಣಗಳ ಬಿಡುಗಡೆಗೆ ನೆರವಾಗುವುದು, ಕಾರ್ಬೋಹೈಡ್ರೇಟ್ಸ್, ಕೊಬ್ಬು, ಅಮಿನೋ ಆಮ್ಲವನ್ನು ಚಯಾ ಪಚಯಗೊಳಿಸುವುದು. ಯಕೃತ್ ಹಾಗೂ ಕಿಡ್ನಿಯಲ್ಲಿ ಇರುವಂತಹ ಅನಗತ್ಯ ರಾಸಾಯನಿಕವನ್ನು ಇದು ತೆಗೆಯುವುದು ಮತ್ತು ಆರೋಗ್ಯಕಾರಿ ನರ ವ್ಯವಸ್ಥೆಯನ್ನು ಕಾಪಾಡುವುದು.
ವಿಟಮಿನ್ ಸಿಯಿಂದ ಸಮೃದ್ಧವಾಗಿರುವಂತಹ ಬಾಳೆಹಣ್ಣು ದೇಹವನ್ನು ಅಂಗಾಂಶ ಹಾಗೂ ಕೋಶಗಳ ಹಾನಿಯಿಂದ ತಡೆಯುವುದು. ಇದು ಕಾಲಜನ್ ಉತ್ಪತ್ತಿಗೆ ನೆರವಾಗುವುದು ಮತ್ತು ಸೆರೊಟೊನಿನ್ ಉತ್ಪತ್ತಿ ಮಾಡಿ ಮೆದುಳಿನ ಆರೋಗ್ಯಕ್ಕೆ ನೆರವಾಗುವುದು.
ಒಂದು ಬಾಳೆಹಣ್ಣು ದಿನದ ಅಗತ್ಯಕ್ಕೆ ಬೇಕಾಗುವ ಶೇ.13ರಷ್ಟು ಮ್ಯಾಂಗನೀಸ್ ನ್ನು ಒದಗಿಸುವುದು. ಮ್ಯಾಂಗನೀಸ್ ದೇಹದಲ್ಲಿ ಕಾಲಜನ್ ಉತ್ಪತ್ತಿಗೆ ನೆರವಾಗುವುದು.
ಚರ್ಮ ಹಾಗೂ ಇತರ ಅಂಗಾಂಶಗಳನ್ನು ಫ್ರೀ ರ್ಯಾಡಿಕಲ್ ನಿಂದಾಗಿ ಆಗುವ ಹಾನಿಯಿಂದ ರಕ್ಷಿಸುವುದು..
ಪೊಟಾಶಿಯಂ ಅಂಶವು ಆರೋಗ್ಯಕಾರಿ ಹೃದಯ ಮತ್ತು ರಕ್ತದೊತ್ತಡಕ್ಕೆ ನೆರವಾಗುವುದು. ಸೋಡಿಯಂ ಅಂಶ ಕಡಿಮೆ ಇರುವ ಬಾಳೆಹಣ್ಣು ಮತ್ತು ಅಧಿಕ ಪೊಟಾಶಿಯಂ ಅಂಶವು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ತುಂಬಾ ಪರಿಣಾಮಕಾರಿಯಾಗಿದ್ದು,ಜೀರ್ಣಕ್ರಿಯೆಗೆ ನೆರವಾಗುವ ಬಾಳೆಹಣ್ಣು, ಜಠರಕರುಳಿನ ಸಮಸ್ಯೆಯನ್ನು ನಿವಾರಣೆ ಮಾಡುವುದು.