ಆರ್ಬಿಐ ರೆಪೋ ದರ ಹೆಚ್ಚಳದ ಬಳಿಕ ಈಗ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಿವೆ. ಹೆಚ್ಡಿಎಫ್ಸಿ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರವನ್ನು 5 ಬೇಸಿಸ್ ಪಾಯಿಂಟ್ನಷ್ಟು ಅಂದರೆ ಶೇಕಡಾ 0.05ರಷ್ಟು ಹೆಚ್ಚಳ ಮಾಡಿದೆ.
ಮೇ ತಿಂಗಳಲ್ಲೂ ಹೆಚ್ಡಿಎಫ್ಸಿ ಸಾಲದ ಮೇಲಿನ ಬಡ್ಡಿ ದರವನ್ನು ಶೇಕಡಾ 0.30ಯಷ್ಟು ಹೆಚ್ಚಳ ಮಾಡಿತ್ತು. ಹೊಸ ಬಡ್ಡಿ ದರ ಇವತ್ತಿನಿಂದಲೇ ಅನ್ವಯ ಆಗಲಿದೆ.
ಐಸಿಐಸಿಐ ಬ್ಯಾಂಕ್ ಕೂಡಾ ಸಾಲದ ಮೇಲಿನ ಬಡ್ಡಿ ದರವನ್ನು ಶೇಕಡಾ 0.30ಯಷ್ಟು ಹೆಚ್ಚಳ ಮಾಡಿದೆ. ಹೊಸ ಬಡ್ಡಿ ದರ ಇವತ್ತಿನಿಂದಲೇ ಅನ್ವಯ ಆಗಲಿದೆ.
ಬಡ್ಡಿ ದರ ಏರಿಕೆಯಿಂದ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಸಾಲಗಳು ದುಬಾರಿ ಆಗಲಿವೆ.