ಬೆಂಗಳೂರಲ್ಲಿ ಗರ್ಲ್ ಫ್ರೆಂಡ್ ಬ್ಯಾಂಕ್ ಅಕೌಂಟ್ಗೆ 5.7 ಕೋಟಿ ರೂಪಾಯಿ ಜಮೆ ಮಾಡಿದ ಬ್ಯಾಂಕ್ ಮ್ಯಾನೇಜರ್ನನ್ನು ಬಂಧಿಸಲಾಗಿದೆ.
ಹನುಮAತನಗರದಲ್ಲಿರುವ ಇಂಡಿಯನ್ ಬ್ಯಾಂಕ್ನ ಮ್ಯಾನೇಜರ್ ಹರಿಶಂಕರ್ ಬಂಧಿತ ಮ್ಯಾನೇಜರ್. ಈತನನ್ನು 10 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಡೇಟಿಂಗ್ ಆಪ್ನಲ್ಲಿ ಸಿಕ್ಕಿದ್ದ ಯುವತಿಯ ಖಾತೆಗೆ ಈತ ಇಷ್ಟೂ ಮೊತ್ತವನ್ನು ವರ್ಗಾವಣೆ ಮಾಡಿದ್ದ.
ಬ್ಯಾಂಕ್ನಲ್ಲಿ ಮಹಿಳಾ ಗ್ರಾಹಕರಿಯೊಬ್ಬರು 1.3 ಕೋಟಿ ರೂಪಾಯಿ ನಿಶ್ಚಿತ ಠೇವಣಿಯನ್ನು ಇಟ್ಟು 75 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಆರೋಪಿತ ಬ್ಯಾಂಕ್ ಅಧಿಕಾರಿಗಳು ಆ ಮಹಿಳೆ ಸಲ್ಲಿಸಿದ್ದ ಬ್ಯಾಂಕ್ ದಾಖಲೆಗಳನ್ನು ತಿರುಚಿ ಓವರ್ಡ್ರಾಫ್ಟ್ ಮೂಲಕ 5.7 ಕೋಟಿ ರೂಪಾಯಿಯನ್ನು ಅಕ್ರಮವಾಗಿ ವರ್ಗಾಯಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ 27 ಖಾತೆಗಳಿಗೆ ಮತ್ತು ಕರ್ನಾಟಕದಲ್ಲಿ 2 ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ.
ಬ್ಯಾಂಕ್ ಮ್ಯಾನೇಜರ್ ಹರಿಶಂಕರ್ ಪ್ರಕಾರ ಮೊದಲಿಗೆ ಆತನ ಖಾತೆಯಲ್ಲಿದ್ದ 12.5 ಲಕ್ಷ ರೂಪಾಯಿ ಹಣವೇ ಡೇಟಿಂಗ್ ಆಪ್ ಮೂಲಕ ವರ್ಗಾವಣೆ ಆಗಿದೆ. ಆ ಬಳಿಕ ಬ್ಯಾಂಕ್ನಲ್ಲಿದ್ದ ಹಣ ವರ್ಗಾವಣೆ ಆಗಿದ್ಯಂತೆ.
ಬ್ಯಾAಕ್ನ ಆಂತರಿಕ ತಪಾಸಣೆ ವೇಳೆ ಈ ಅಕ್ರಮ ಬಯಲಾಗಿದೆ.
ಗರ್ಲ್ ಫ್ರೆಂಡ್ ಖಾತೆಗೆ 5.7 ಕೋಟಿ ರೂ. ವರ್ಗಾವಣೆ – ಬೆಂಗಳೂರಲ್ಲಿ ಬ್ಯಾಂಕ್ ಮ್ಯಾನೇಜರ್ ಅರೆಸ್ಟ್