ಪಬ್ಜಿ ಗೇಮ್ ಆಡುವುದನ್ನು ತಡೆದಿದ್ದಕ್ಕಾಗಿ ಬಾಲಕನೋರ್ವ ತಾಯಿಯನ್ನೇ ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.
ಬಾಲಕ ಪಬ್ಜಿ ಗೇಮ್ ವ್ಯಸನಿಯಾಗಿದ್ದ. ಪಬ್ಜಿ ಆಡದಂತೆ ಆತನ ತಾಯಿ ತಡೆಯುತ್ತಿದ್ದರು. ಹೀಗಾಗಿ ಆತ ತಂದೆಯ ಪಿಸ್ತೂಲ್ನಿಂದ ತಾಯಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೂರ್ವ ಲಖನೌ ಎಡಿಸಿಪಿ ಹೇಳಿದ್ದಾರೆ.
ಪಬ್ಜಿ ಆಡದಂತೆ ತಡೆದಿದ್ದಕ್ಕಾಗಿ 16 ವಯಸ್ಸಿನ ಬಾಲಕ ತಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದ’ ಎಂದು ಪೂರ್ವ ಲಖನೌ ಎಡಿಸಿಪಿ ಖಾಸಿಮ್ ಅಬಿದಿ ತಿಳಿಸಿದ್ದಾರೆ.
ಬಾಲಕ ಸುಳ್ಳು ಕಥೆ ಹೇಳಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿ. ಬಾಲಕನನ್ನು ವಶಕ್ಕೆ ಪಡೆದಿದ್ದೇವೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಎಡಿಸಿಪಿ ಖಾಸಿವ್ ಹೇಳಿದ್ದಾರೆ.