ಶನಿವಾರ ಸಾಯಂಕಾಲ ಚಿಕ್ಕಬಳ್ಳಾಪುರದಲ್ಲಿ ತೆಲುಗು ಸಿನೆಮಾ RRR ಸಿನೆಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ರಾಜ್ಯದ ಸಿಎಂ ತೆಲುಗು ಸಿನೆಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಿಸಿರುವುದಕ್ಕೆ ರಾಜ್ಯದ ಜನ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ..
ಸಾವಿಗಿಂತ ಕಾರ್ಯಕ್ರಮ ಹೆಚ್ಚಾಯಿತೇ?
ಪಾವಗಡದ ಬಸ್ ದುರಂತ ನಡೆದ ಸ್ಥಳಕ್ಕೆ ಹೋಗಿದ್ರ?ಅಧಿಕಾರಿಗಳೊಂದಿಗೆ ಚರ್ಚಿಸಿ ಅಲ್ಲಿಗೆ ಸರ್ಕಾರಿ ಸಾರಿಗೆ ವ್ಯವಸ್ಥೆ ಮಾಡಿಸಿ ಆಯ್ತಾ ?
ಮಾಡಬೇಕಾದ ಮುಖ್ಯವಾದ ಕೆಲಸಗಳು ಸಾಕಷ್ಟಿವೆ ರಾಜ್ಯದ ಜನರ ಕಷ್ಟಗಳಿಗೆ ಸ್ಪಂದಿಸದೆ,ಸಿಎಂ ಆಗಿ ಏನು ಆಗೇ ಇಲ್ಲವೇನೋ ಅಂತ ಕಾರ್ಯಕ್ರಮದಲ್ಲಿ ಇರೋದು ನಮ್ಮೆಲ್ಲರ ದೌರ್ಭಾಗ್ಯ. https://t.co/2fhpNQuW5l— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) March 19, 2022
ರಾಜ್ಯದಲ್ಲಿಯೇ ದೊಡ್ಡ ದೊಡ್ಡ ಕೆಲಸಗಳಿವೆ ಅಂತಹ ಕೆಲಸಗಳನ್ನು ಬಿಟ್ಟು ತೆಲುಗು ಸಿನೆಮಾ ಪ್ರಚಾರಕ್ಕೆ ಮುಖ್ಯಮಂತ್ರಿ ಹೋಗಿರುವುದು ಸರಿಯಲ್ಲ ಎಂದು ಕೆಲವರು ತಮ್ಮ ಆಕ್ರೋಶವನ್ನು ಹೊರಹಾಕಿದರೇ, ಮತ್ತೆ ಕೆಲವರು ಮದುವೆ, ಮುಂಜಿ, ಧಾರವಾಹಿ, ಸಿನೆಮಾ ಕಾರ್ಯಕ್ರಮಗಳಿಗಾಗಿ ಆಹ್ವಾನಿಸಿ ಎಂದು ಸಿಎಂ ಫೋಟೋ ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸಿನಿಮಾ – ಧಾರವಾಹಿ ಪ್ರಚಾರ, ಮದುವೆ ಮುಂಜಿಗಳಿಗೆ ಸಂಪರ್ಕಿಸಿ!! pic.twitter.com/WrByPWHnoA
— ಕನ್ನಡಿಗ | 𝐊𝐚𝐧𝐧𝐚𝐝𝐢𝐠𝐚 (@Kannadiga71) March 19, 2022
ಅಲ್ಲದೇ, ಮುಖ್ಯಮಂತ್ರಿ ಬೊಮ್ಮಾಯಿಯವರ ಪೋಸ್ಟ್ ಗೆ ಹಲವರು ಖಾರವಾಗಿ ಉತ್ತರಿಸಿದ್ದಾರೆ.
ನಿಮ್ಮ ಈ ನಡೆ ಕನ್ನಡಿಗರಾದ ನಮಗೆ ಭಾರಿ ಅವಮಾನವಾಗಿದೆ, ಕನ್ನಡ ಚಿತ್ರವಾದ ಪುನೀತ್ ರಾಜ್ಕುಮಾರರ ಜೇಮ್ಸ ಚಿತ್ರಕ್ಕೇ ಬೆಂಬಲ ಕೂಡವುದು ಬಿಟ್ಟು ಪರಭಾಷೆಯ ಚಿತ್ರಕ್ಕೇ ಪ್ರಚಾರ ಮಾಡುತ್ತಿರುವಿರಲ್ಲಾ, ಒಬ್ಬ ಮುಖ್ಯಮಂತ್ರಿಯಾಗಿ ನೀವು ಮಾಡುತ್ತಿರುವುದು ಎಷ್ಟು ಸರಿ…?😡 ಕನ್ನಡ ವಿರೋಧಿ ಮುಖ್ಯಮಂತ್ರಿ…
— J Santhosh….ಸಂತು (@__SanthoshJ__9) March 19, 2022
ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ, ನಟರಾದ ಜೂ.ಎನ್ಟಿಆರ್ ಹಾಗೂ ರಾಮ್ ಚರಣ್ ನಟನೆಯ RRR ಚಿತ್ರ ಮುಂದಿನ ವಾರ ಫೆ.25 ರಂದು ರಾಷ್ಟ್ರಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಡಬ್ ಮಾಡಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಸಿನೆಮಾ ಬಿಡುಗಡೆ ಪೂರ್ವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.