198 ಇರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ಗಳನ್ನು 243 ವಾರ್ಡ್ಗಳಾಗಿ ಪುನರ್ ವಿಂಗಡಣೆಗೊಳಿಸಿ ಪುನರ್ವಿಂಗಡಣೆ ಆಯೋಗ ನಗರಾಭಿವೃದ್ಧಿ ಇಲಾಖೆಗೆ ವರದಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.
ಈ ವರದಿಯಲ್ಲಿ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ವಾರ್ಡ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಶಿವಾಜಿನಗರ ಕ್ಷೇತ್ರದಲ್ಲಿ ವಾರ್ಡ್ ಸಂಖ್ಯೆ ಇಳಿಕೆ ಮಾಡಲಾಗಿದೆ. ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ವಾರ್ಡ್ಗಳ ಸಂಖ್ಯೆಯನ್ನು ಹಿಂದೆ ಹೇಗಿತ್ತೂ ಅಷ್ಟೇ ಉಳಿಸಿಕೊಳ್ಳಲಾಗಿದೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್ಗಳ ಸಂಖ್ಯೆ 5ರಿಂದ 13ಕ್ಕೆ, ಬೊಮ್ಮನಹಳ್ಳಿ ಕ್ಷೇತ್ರದಲ್ಲಿ 6ರಿಂದ 14ಕ್ಕೆ, ಬ್ಯಾಟರಾಯನಪುರದಲ್ಲಿ 4ರಿಂದ 11ಕ್ಕೆ, ಆರ್ ಆರ್ ನಗರದಲ್ಲಿ 4ರಿಂದ 13ಕ್ಕೆ, ಮಹದೇವಪುರದಲ್ಲಿ 4ರಿಂದ 12ಕ್ಕೆ ಏರಿಕೆ ಮಾಡಿ ವರದಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಆದರೆ ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಗೋವಿಂದರಾಜನಗರ, ಜಯನಗರ, ಹೆಬ್ಬಾಳ, ಪುಲಕೇಶಿನಗರ, ರಾಜಾಜಿನಗರ, ಶಾಂತಿನಗರ ಕ್ಷೇತ್ರದಲ್ಲಿ ವಾರ್ಡ್ಗಳ ಸಂಖ್ಯೆ ಬದಲಾವಣೆ ಆಗಿಲ್ಲ ಎಂದು ತಿಳಿದುಬಂದಿದೆ.
ಶಿವಾಜಿನಗರದಲ್ಲಿ ವಾರ್ಡ್ಗಳ ಸಂಖ್ಯೆ 6ಕ್ಕೆ ಇಳಿಕೆ ಆಗಿದೆ. ಯಲಹಂಕ, ವಿಜಯನಗರ, ಪದ್ಮನಾಭನಗರ, ಬಿಟಿಎಂ ಲೇಔಟ್, ಬಸವನಗುಡಿ ಕ್ಷೇತ್ರಗಳಲ್ಲಿ ಒಂದೊAದು ವಾರ್ಡ್ನ್ನು ಹೆಚ್ಚಳ ಮಾಡಲಾಗಿದೆ.
2011ರ ಜನಗಣತಿ ಆಧರಿಸಿ ವಾರ್ಡ್ಗಳ ಪುನರ್ವಿಂಗಡಣೆ ಮಾಡಲಾಗಿದೆ. ಪ್ರತಿಯೊಂದು ವಾರ್ಡ್ನಲ್ಲೂ 34,750 ಜನಸಂಖ್ಯೆ ಇರಲಿದೆ ಎಂದು ವರದಿ ಆಗಿದೆ.