ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರನ್ನು ಕಾಂಗ್ರೆಸ್ ಸರ್ಕಾರ ನೇಮಿಸಿದೆ.
ಈ ಹಿಂದೆ ರಾಕೇಶ್ ಸಿಂಗ್ ಅವರು ಬಿಡಿಎ ಆಯುಕ್ತರಾಗಿ ಕೆಲಸ ಮಾಡಿದ್ದರು.
ಇಲ್ಲಿಯವರೆಗೆ ಬೆಂಗಳೂರು ನಗರದ ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಬಿಡಿಎ ಅಧ್ಯಕ್ಷರಾಗಿದ್ದರು.
ಬಿಡಿಎ ಮಾತ್ರವಲ್ಲದೇ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ರಾಕೇಶ್ ಸಿಂಗ್ ಅವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಜೊತೆಗೆ ಉಳಿದ ಹತ್ತು ಯೋಜನಾ ಪ್ರಾಧಿಕಾರಗಳಿಗೂ ರಾಕೇಶ್ ಸಿಂಗ್ ಅವರೇ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
1. ಆನೇಕಲ್ ಯೋಜನಾ ಪ್ರಾಧಿಕಾರ
2. ಹೊಸಕೋಟೆ ಯೋಜನಾ ಪ್ರಾಧಿಕಾರ
3. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ
4. ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ
5. ಮಾಗಡಿ ಯೋಜನಾ ಪ್ರಾಧಿಕಾರ
6. ಚನ್ನಪಟ್ಟಣ ಯೋಜನಾ ಪ್ರಾಧಿಕಾರ
7. ಕನಕಪುರ ಯೋಜನಾ ಪ್ರಾಧಿಕಾರ
8. ನೆಲಮಂಗಲ ಯೋಜನಾ ಪ್ರಾಧಿಕಾರ
9. ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ
10. ಬೃಹತ್ ಬೆಂಗಳೂರು – ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರ
ADVERTISEMENT
ADVERTISEMENT