ಡಿ.4ರಿಂದ ಆರಂಭವಾಗಿದ್ದ ಬೆಳಗಾವಿಯ ಚಳಿಗಾಲದ ಅಧಿವೇಶನ ಇಂದು ಅಂತ್ಯವಾಗಿದೆ. ಕೊನೆ ದಿನದ ಇಂದಿನ ಕಲಾಪದಲ್ಲಿ ಸಭಾಧ್ಯಕ್ಷ ಯು.ಟಿ ಖಾದರ್ ಈ ಬಗ್ಗೆ ಮಾತನಾಡಿ ಈ ಬಾರಿ ದೀರ್ಘಾವಧಿ ಚರ್ಚೆಯಾಗಿದ್ದು, 17 ಬಿಲ್ ಗಳನ್ನ ಅಂಗೀಕರಿಸಲಾಗಿದೆ. 150 ಗಮನ ಸೆಳೆಯುವ ಸೂಚನೆ ಕುರಿತಾಗಿ ಚರ್ಚೆಯಾಗಿದ್ದು, ಅಧಿವೇಶನ ಅತ್ಯಂತ ಸಂತೋಷ ತಂದಿದೆ ಎಂದರು.
ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆ
ಈ ಬಾರಿಯ ವಿಧಾನ ಸಭಾ ಕಲಾಪದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಾಗಿ ವಿಶೇಷ ಚರ್ಚೆಯಾಗಿದೆ. 42 ಶಾಸಕರು 11 ಗಂಟೆ 04 ನಿಮಿಷಗಳ ಕಾಲ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಮಾತನಾಡಿದ್ದಾರೆ. ರಾಜ್ಯದಲ್ಲಿನ ಬರಗಾಲ ಮತ್ತು ಇದನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನೀತಿಗಳನ್ನು ರೂಪಿಸಲಾಗಿದೆ. ಹಾಗೂ ಯುವ ಶಾಸಕರು ಹವಮಾನ ಬದಲಾವಣೆ ಹಾಗೂ ಅದರ ಗಂಭೀರತೆಯ ಬಗ್ಗೆ ಸದನಲ್ಲಿ ಗಹನ ವಿಚಾರಗಳನ್ನು ಮಂಡಿಸಿದ್ದಾರೆ ಎಂದು ಸ್ಪೀಕರ್ ತಿಳಿಸದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಹನ್ನೊಂದು ಗಂಟೆ ಹನ್ನೊಂದು ನಿಮಿಷಗಳ ಕಾಲ ಚರ್ಚೆಯಾಗಿದ್ದು, ಸಿಎಂ ಉತ್ತರವನ್ನೂ ಕೊಟ್ಟಿದ್ದಾರೆ. ಇನ್ನು ಪ್ರಮುಖವಾಗಿ 2 ದಿನ ಬರಗಾಲದ ಮೇಲೆ ಚರ್ಚೆಯಾಗಿದ್ದು, ಇದಕ್ಕೆ ಕಂದಾಯ ಸಚಿವ ಕೃಷ್ಣಭೇರೇಗೌಡ ಉತ್ತರ ಕೊಟ್ಟಿದ್ದಾರೆ ಎಂದು ವಿವರಿಸಿದರು.
ಶಾಸಕರು ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂದಿತ್ತು. ಈ ಭಾರಿ ಅದನ್ನ ತಪ್ಪಿಸಿದ್ದೇವೆ. ಧರಣಿ, ಪ್ರತಿಭಟನೆ ಪ್ರಜಾಪ್ರಭುತ್ವದ ಸೌಂದರ್ಯ. ಪತ್ರಕರ್ತರು ಹಲವು ಸಲಹೆಯಂತೆಯೇ ನಾವು ನಡೆದುಕೊಂಡಿದ್ದೇವೆ. ಎಲ್ಲರಿಗೆ ನಾವು ಋಣಿಯಾಗಿದ್ದೇವೆ. ಕೆಲವು ಸಣ್ಣ ಪುಟ್ಟ ಸಮಸ್ಯೆಗಳು ಆಗಿವೆ ಎಂದರು. ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ್ದೇವೆ. ಪರಿಸರ ಪ್ರೇಮಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಲ್ಲಿ ಶಾಸಕರು ಇದರಲ್ಲಿ ಪಾಲ್ಗೊಂಡಿದ್ದರು. ಹಿಂದೆ ಕಲಾಪ ನೋಡಲು ವಿದ್ಯಾರ್ಥಿಗಳು ಕಾಯಬೇಕಿತ್ತು. ಈ ಬಾರಿ ಅವರಿಗಾಗಿಯೂ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು ಎಂದು ವಿಧಾನಸಭಾ ಸ್ಪೀಕರ್ ಖಾದರ್ ಮಾಹಿತಿ ನೀಡಿದರು.
ಈ ಬಾರಿಯ ಅಧಿವೇಶನವನ್ನು ರಾಜ್ಯ ಮೂಲೆ ಮೂಲೆಗಳಿಂದ ಆಗಮಿಸಿದ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ವೀಕ್ಷಿಸಿದರು. ಪ್ರಜಾಪ್ರಭುತ್ವ ಹಾಗೂ ಸಂಸದೀಯ ಅಂಶಗಳ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಲು ಮ್ಕಳಿಗೆ ಸುವರ್ಣಾವಕಾಶ ಒದಗಿತು. ಇದರ ನಡುವೆ ಸಾರ್ವಜನಿಕರು ಅತಿ ಹೆಚ್ಚು ಸಂಖ್ಯೆಯಲ್ಲಿ ಕಲಾಪಗಳನ್ನು ವೀಕ್ಷಿಸಿದ ಇತಿಹಾಸ ಸೃಷ್ಠಿಯಾಯಿತು.