ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಅಂಕಮ್ಮನಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ ಭೇದಿ ಪ್ರಕರಣದಲ್ಲಿನ ಅಸ್ವಸ್ಥರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.
ಅಸ್ವಸ್ಥ 50 ಜನರಲ್ಲಿ 22 ಜನರು ಸಂಡೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಂಕಮ್ಮನಾಳ ಗ್ರಾಮದ ತುರ್ತು ಚಿಕಿತ್ಸಾ ಕೇಂದ್ರದಲ್ಲಿ 6 ಜನರನ್ನು ದಾಖಲು ಮಾಡಲಾಗಿದೆ.
ಉಳಿದವರು ಬಳ್ಳಾರಿಯ ವಿಮ್ಸ್. ಹೊಸಪೇಟೆ, ಕೊಪ್ಪಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದಬಂದಿದೆ. ಚರಂಡಿ ನೀರು ಮಿಶ್ರಿತ ನೀರು ಸೇವನೆಯಿಂದ ವಾಂತಿಭೇದಿ ಕಾಣಿಸಿಕೊಂಡಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲೆ ಬೀಡುಬಿಟ್ಟಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಈ ಗ್ರಾಮದ ಬಾಲಕಿಯೊಬ್ಬಳು ಕಲುಷಿತ ನೀರಿನ ಸೇವನೆಯಿಂದಾಗಿ ಸಾವನ್ನಪ್ಪಿದ್ದಳು.