ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಅವರನ್ನು `ಲೂಟಿ ರವಿ’ ಎಂದು ಕರೆದಿರುವ ಕಾಂಗ್ರೆಸ್, `ಬೆಂಗಳೂರು, ದೆಹಲಿ, ದೇವನಹಳ್ಳಿ, ಹಾಸನ ಸೇರಿದಂತೆ ಹಲವು ಕಡೆಗಳಲ್ಲಿ ಸಿ ಟಿ 400ರಿಂದ 500 ಎಕರೆ ಜಮೀನು ಮಾಡಿದ್ದಾರೆ. ಇದು ಎಲ್ಲಿಂದ ಬಂತು’ ಎಂದು ಪ್ರಶ್ನಿಸಿದೆ.
ಮೈಸೂರಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ವಕ್ತಾರ ಎಂ ಸಿ ಲಕ್ಷö್ಮಣ್
`ಸತ್ಯ ಹರಿಶ್ಚಂದ್ರನ ರೀತಿಯಲ್ಲಿ ಬಿಂಬಿಸಿಕೊಳ್ತಾರಲ್ಲ ಇವ್ರು.. ಸಿ ಟಿ ರವಿ..ಸಿ ಟಿ ರವಿ ಅಲ್ಲ ಇವ್ರು ಲೂಟಿ ರವಿ. ಸಿ ಟಿ ರವಿ ಅವರಿಗೆ ನೇರವಾಗಿ ಒಂದಷ್ಟು ಪ್ರಶ್ನೆಗಳು ಕೇಳ್ತೇವೆ, ಉತ್ತರ ಕೊಡ್ಬೇಕು ನಮಗೆ’
`ನಿಮ್ಮದೇ ಪಕ್ಷದ ಕಾರ್ಯಕರ್ತ ಆರ್ಟಿಐನಲ್ಲಿ ತೆಗೆದುಕೊಂಡಿರುವ ಮಾಹಿತಿಯ ಪ್ರಕಾರ 10 ವರ್ಷದ ಹಿಂದೆ ನಿಮ್ಮ ಅಣ್ಣ-ತಮ್ಮಂದಿರು, ನಿಮ್ಮ ತಂದೆ-ತಾಯಿ ಎಲ್ಲ ಸೇರಿ ನಿಮ್ಮ ಒಡನಾಟದಲ್ಲಿರುವಂತ ಜಮೀನು 19 ಎಕರೆ 3 ಗುಂಟೆ. ಇವತ್ತು ನಿಮ್ಮ ಆಸ್ತಿ ಎಲ್ಲೆಲ್ಲಿ ಮಾಡಿದ್ದೀರಿ..? ಬೆಂಗಳೂರಲ್ಲಿ ಅಪಾರ್ಟ್ಮೆಂಟ್ ಇದೆ, ಮನೆಗಳಿವೆ, ಸೈಟ್ ಇದೆ, ಮೈಸೂರಲ್ಲಿದೆ, ಹಾಸನದಲ್ಲಿದೆ, ದೆಹಲಿಯಲ್ಲಿದೆ, ದೇವನಹಳ್ಳಿಯಲ್ಲಿದೆ. ನಮಗಿರುವ ಮಾಹಿತಿ ಪ್ರಕಾರ 400ರಿಂದ 500 ಎಕರೆ ಜಮೀನನ್ನು ನಿಮ್ಮ ಭಾವನ ಹೆಸರಲ್ಲಿ ಮಾಡಿದ್ದೀರಿ. ಸಿ ಟಿ ರವಿ ಹೆಸರಲ್ಲಿ ಇಲ್ಲ, ನಿಮ್ಮ ಭಾವ ಸುದರ್ಶನ್ ಹೆಸರಲ್ಲಿ ಆಸ್ತಿ ಮಾಡಿದ್ದೀರಿ’
`ಚಿಕ್ಕಮಗಳೂರು ನಗರಸಭೆಯ ಎಲ್ಲ ಗುತ್ತಿಗೆಗಳನ್ನೂ ಸಿ ಟಿ ರವಿ ಅವರ ಭಾವ ಸುದರ್ಶನ್ ಅವರೇ ಮಾಡುವುದು. ಚಿಕ್ಕಮಗಳೂರಲ್ಲಿ 360 ಕೋಟಿ ರೂಪಾಯಿ ಮೊತ್ತದ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಕಾಮಗಾರಿಯನ್ನು ಸಿ ಟಿ ರವಿ ತಮ್ಮ ಭಾವ ಸುದರ್ಶನ್ಗೆ ಕೊಡಿಸಿದ್ದಾರೆ. ಸತ್ಯಹರಿಶ್ಚಂದ್ರನ ಮೊಮ್ಮಗನ ಥರ ಬಂದು ಮಾತಾಡುವ ಸಿ ಟಿ ರವಿ ಹೇಳ್ಬೇಕು. ಯಾರ ಬೇನಾಮಿ ಹೆಸರಲ್ಲಿ ಕಾಂಟ್ರಾಕ್ಟ್ ಮಾಡಿಸ್ತಿದ್ದೀರಿ.
`ಚಿಕ್ಕಮಗಳೂರಲ್ಲೊಂದು ರಾಷ್ಟಿçÃಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. 60 ಕಿಲೋ ಮೀಟರ್ ದೂರದ ರಾಷ್ಟಿçÃಯ ಹೆದ್ದಾರಿ ಕಾಮಗಾರಿಯನ್ನು ಯಾರಿಗೆ ಕೊಟ್ಟಿದ್ದೀರಿ..? ಸಿ ಟಿ ರವಿ ಭಾವ ಸುದರ್ಶನ್ಗೆ ಕೊಟ್ಟಿದ್ದೀರಿ, ಅವರು ಬೇರೆಯವರಿಗೆ ತುಂಡು ಗುತ್ತಿಗೆ ಕೊಟ್ಟಿದ್ದಾರೆ.’
`ಇಷ್ಟು ಆಸ್ತಿ ಎಲ್ಲಿಂದ ಬಂತು ಎಂಬ ಬಗ್ಗೆ ಜಾರಿ ನಿರ್ದೇಶನಾಲಯದಿಂದ ತನಿಖೆ ಮಾಡಿಸಿ. ಸಿ ಟಿ ರವಿ ತಮ್ಮ ಭಾವನ ಮೂಲಕ ಬೇನಾಮಿ ಆಸ್ತಿ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ರಸ್ತೆ ಕಾಮಗಾರಿಗಳನ್ನು ತಮ್ಮ ಭಾವನಿಗೆ ಕೊಡಿಸಿದ್ದಾರೆ. ಎಲ್ಲವೂ ಸಿ ಟಿ ರವಿ ಭಾವ ಸುದರ್ಶನ್ ಮೂಲಕವೇ ಹೋಗ್ಬೇಕು. ಗುತ್ತಿಗೆ ಪಡೆಯಲು ಸುದರ್ಶನ್ಗೆ ಕಪ್ಪ ಕೊಡಬೇಕು.
ಮೂಡಿಗೆರೆ ಬಿಜೆಪಿ ಎಂಎಲ್ಎ ಕುಮಾರಸ್ವಾಮಿಗೂ ಸಿ ಟಿ ರವಿ ಅವರಿಗೂ ಗಲಾಟೆ ಆಗಿದ್ದು ಇದೇ ಕಾರಣಕ್ಕೆ’ ಎಂದು ಕೆಪಿಸಿಸಿ ವಕ್ತಾರ ಲಕ್ಷö್ಮಣ್ ಗಂಭೀರ ಆರೋಪ ಮಾಡಿದ್ದಾರೆ.