ಕೊರೋನಾ ಸಾಂಕ್ರಾಮಿಕ ರೋಗ ಹಬ್ಬುವಿಕೆಯನ್ನು ತಡೆದು 4 ನೇ ಅಲೆಯನ್ನು ನಿಯಂತ್ರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಸ್ಕ್ ಕಡ್ಡಾಯ ಮಾಡಿ ಆದೇಶಿಸಿದೆ.
ಭಾನುವಾರ ಬೆಂಗಳೂರಲ್ಲಿ 291 ಕೊರೋನಾ ಪ್ರಕರಣಗಳು ಹಾಗೂ ಕೊರೋನಾದಿಂದ 1 ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮಾರ್ಷಲ್ಗಳು ಮಾಸ್ಕ್ ತಪಾಸಣೆಯನ್ನು ಮಾಡಲಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಬಿಎಂಪಿ ವಿಶೇಷ ಕಮೀಷನರ್ ಹರೀಶ್ ಕುಮಾರ್ ಅವರು, ಬೆಂಗಳೂರಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯ ನಿಯಮ ಜಾರಿಗೆ ತರಲಾಗುತ್ತಿದೆ.
ಶಾಪಿಂಗ್ ಮಾಲ್ಸ್, ಬಸ್ಸ್ಟಾಂಡ್ಸ್, ರೈಲ್ವೇ ಸ್ಟೇಷನ್ಸ್, ಶಾಲಾ ಕಾಲೇಜುಗಳಲ್ಲಿ ಮಾಸ್ಕ್ ದಾರಣೆ ಕಡ್ಡಾಯ ಮಾಡಲಾಗಿದೆ. ಬಿಬಿಎಂ ಮಾರ್ಷಲ್ಗಳು ತಪಾಸಣೆ ಮಾಡಲಿದ್ದಾರೆ ಎಂದು ಹೇಳಿದರು.
ಮಾಸ್ಕ್ ಕಡ್ಡಾಯ ಮಾಡಲಾಗಿದೆ ಆದರೆ, ಸದ್ಯಕ್ಕೆ ದಂಡ ವಿಧಿಸುವ ಯಾವುದೇ ನಿರ್ಧಾರವನ್ನು ಬಿಬಿಎಂಪಿ ಮಾಡಿಲ್ಲ. ಪ್ರಸ್ತುತ ಬಿಬಿಎಂ 16 ಸಾವಿರ ಜನರ ಕೊರೋನಾ ಪರೀಕ್ಷೆ ಮಾಡುತ್ತಿದ್ದು, ಈ ಸಂಖ್ಯೆಯನ್ನು 20 ಸಾವಿರಕ್ಕೆ ಹೆಚ್ಚಿಸಲಾಗುವುದು ಎಮದು ಹರೀಶ್ ಕುಮಾರ್ ಹೇಳಿದ್ದಾರೆ.