ಬೆಂಗಳೂರಿ(Bengaluru)ನಲ್ಲಿ ಇಂದು ಮತ್ತೊಬ್ಬ ಶಂಕಿತ ಉಗ್ರ (Suspected Terrorist) ನನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಈ ಶಂಕಿತ ಉಗ್ರನನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
ನಿನ್ನೆ ರಾತ್ರಿ ಬೆಂಗಳೂರಿ(Bengaluru)ನಲ್ಲಿ ಪುಡ್ ಡೆಲಿವರಿ ಬಾಯ್ಸ್ (Food Delivery Boys)ಗಳೊಂದಿಗೆ ಉಳಿದುಕೊಂಡಿದ್ದ ಶಂಕಿತ ಉಗ್ರ ಅಕ್ತರ್ ಹುಸೇನ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆತನ ಹೇಳಿಕೆಯನ್ನಾಧರಿಸಿ ಮತ್ತೊಬ್ಬ ಶಂಕಿತ ಉಗ್ರನನ್ನು ಇಂದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
2 ದಿನದಲ್ಲಿಯೇ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆ ಮೂಲಕ ಬೆಂಗಳೂರು ಉಗ್ರರ ಹಡಗು ತಾಣವಾಗಿದೆಯಾ ಎನ್ನುವ ಪ್ರಶ್ನೆಗಳು ಉದ್ಭವವಾಗುತ್ತಿವೆ. ಕೆಲ ತಿಂಗಳ ಹಿಂದೆಯಷ್ಟೇ ಒಬ್ಬ ಶಂಕಿತ ಉಗ್ರ( Bengaluru Suspected Terrorist)ನನ್ನು ಸಿಸಿಬಿ ಪೊಲೀಸರು(CCB Police) ವಶಕ್ಕೆ ಪಡೆದುಕೊಂಡಿದ್ದರು.
ಶಂಕಿತ ಉಗ್ರ ಅಖ್ತರ್ ಹುಸೇನ್ನನ್ನ ಬಂಧಿಸಿದ್ದು ಹೇಗೆ?
ಅಖ್ತರ್ ಹುಸೇನ್ ಫುಡ್ ಡೆಲಿವರಿ ಹುಡುಗರೊಂದಿಗೆ ರೂಮ್ ಹಂಚಿಕೊಂಡಿದ್ದ ಎನ್ನಲಾಗಿದೆ. ಕೇವಲ ರಾತ್ರಿ ಮಾತ್ರ ಈತ ಫುಡ್ ಡೆಲಿವರಿ ಮಾಡುತ್ತಿದ್ದ. ಹಗಲಲ್ಲಿ ರೂಮಿನಿಂದ ಹೊರಗಡೆಯೇ ಬರುತ್ತಿರಲಿಲ್ಲ.
ತಿಲಕ್ನಗರದಲ್ಲಿನ ಈ ರೂಮ್ ನ ಬಗ್ಗೆ ಸಿಸಿಬಿ ಪೊಲೀಸರು (CCB Police) ತಿಳಿಸುಕೊಂಡಿದ್ದರು. ಆರೋಪಿ(Suspected Terrorist)ಯ ಮೊಬೈಲ್ ಟವರ್ ಆಧರಿಸಿ ಆತ ರೂಮ್ನಿಂದ ಹೊರಗಡೆ ಬರುವಾಗ ಸಿಸಿಬಿ ಪೊಲೀಸರು ಬಂಧಿಸಿದ್ದರು.