ಕೆಜಿಎಫ್ (KGF) ಸಿನಿಮಾದ ಹಾಡಿನ ಬಳಸಿ ಕೃತಿಚೌರ್ಯ ಮಾಡಿದ್ದಾರೆ ಎಂಬ ಆರೋಪದಡಿ ಕಾಂಗ್ರೆಸ್ (Indian National Congress) ಮತ್ತು ಭಾರತ್ ಜೋಡೋ (Bharat Jodo Yatra) ಅಧಿಕೃತ ಟ್ವಿಟ್ಟರ್ ಖಾತೆಗಳನ್ನು ನಿರ್ಬಂಧಿಸುವಂತೆ ಬೆಂಗಳೂರಿನ ನ್ಯಾಯಾಲಯ ಆದೇಶಿಸಿದೆ.
ಕೆಜಿಎಫ್ ಸಿನಿಮಾದ ಹಾಡು ಬಳಸಿ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಮೂರು ವೀಡಿಯೋಗಳನ್ನು ತೆಗೆದು ಹಾಕುವಂತೆ ಸೂಚಿಸಿದೆ.
ಜೊತೆಗೆ ಮುಂದಿನ ವಿಚಾರಣೆ ನಡೆಯುವರೆಗೂ ಕಾಂಗ್ರೆಸ್ ಮತ್ತು ಭಾರತ್ ಜೋಡೋ ಅಧಿಕೃತ ಖಾತೆಗಳನ್ನು ನಿರ್ಬಂಧಿಸುವಂತೆ ಸೂಚಿಸಿದೆ.
ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಧೀಶೆ ಲತಾಕುಮಾರಿ ಅವರು ಆದೇಶಿಸಿದ್ದಾರೆ. ಮುಂದಿನ ವಿಚಾರಣೆಯನ್ನು ನವೆಂಬರ್ 21ಕ್ಕೆ ಮುಂದೂಡಲಾಗಿದೆ.
ಎಂಆರ್ಟಿ ಮ್ಯೂಸಿಕ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC), ಸುಪ್ರಿಯಾ ಶ್ರೀನಾಟೆ (Supriya Shrinate) ವಿರುದ್ಧ ಎಂಆರ್ಟಿ ಮ್ಯೂಸಿಕ್ (MRT Music) ಕೃತಿ ಚೌರ್ಯದ ದೂರು ನೀಡಿತ್ತು.
ಏನಿದು ಕೃತಿಚೌರ್ಯ ಆರೋಪ:
ಭಾರತ್ ಜೋಡೋ ಯಾತ್ರೆಯ ವೀಡಿಯೋಗಳಿಗೆ ಕೆಜಿಎಫ್ ಸಿನಿಮಾದ ಮ್ಯೂಸಿಕ್ ಮತ್ತು ಹಾಡನ್ನು ಬಳಸಿ ವೀಡಿಯೋಗಳನ್ನು ಟ್ವಿಟ್ಟರ್ ಖಾತೆಗಳಲ್ಲಿ ಕಾಂಗ್ರೆಸ್ ಹಂಚಿಕೊಂಡಿತ್ತು.
ಬೆಂಗಳೂರಿನ ವಾಣಿಜ್ಯ ನ್ಯಾಯಾಲಯದ ಕಂಪ್ಯೂಟರ್ ವಿಭಾಗದ ಜಿಲ್ಲಾ ಸಿಸ್ಟಂ ಆಡಳಿತಾಧಿಕಾರಿ ಎಸ್ ಎನ್ ವೆಂಕಟೇಶಮೂರ್ತಿ ಅವರನ್ನು ಲೋಕಲ್ ಕಮಿಷನರ್ ಆಗಿ ನೇಮಿಸಿರುವ ಕೋರ್ಟ್ ಪ್ರತಿವಾದಿಗಳ ವೆಬ್ಸೈಟ್ ಪರಿಶೀಲಿಸಿ ಎಲೆಕ್ಟ್ರಾನಿಕ್ ಆಡಿಟ್ ಕೈಗೊಳ್ಳುವಂತೆ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ಸೂಚಿಸಿದೆ.
ADVERTISEMENT
ADVERTISEMENT