ಬೆಂಗಳೂರು – ಮಂಗಳೂರು (Bengaluru-Mangaluru) ನಡುವೆ ವಾರದಲ್ಲಿ ಮೂರು ದಿನವಷ್ಟೇ ಸಂಚರಿಸುತ್ತಿದ್ದ ರೈಲು ಈಗ ವಾರದಲ್ಲಿ ಆರು ದಿನ ಸಂಚರಿಸಲಿದೆ.
ಸೆಪ್ಟೆಂಬರ್ 1ರಿಂದಲೇ ವಾರದಲ್ಲಿ 6 ದಿನಗಳ ಓಡಾಟ ಶುರುವಾಗಲಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ರೈಲು (ರೈಲು ಸಂಖ್ಯೆ 16585) ಶನಿವಾರ ಬಿಟ್ಟು ವಾರದ ಉಳಿದ ದಿನಗಳಲ್ಲಿ ಸಂಚರಿಸಲಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹೊರಡುವ ರೈಲು (ರೈಲು ಸಂಖ್ಯೆ 16586) ಶುಕ್ರವಾರ ಬಿಟ್ಟು ವಾರದ ಉಳಿದ ದಿನ ಸಂಚರಿಸಲಿದೆ.
ಬೆಂಗಳೂರಿನಿಂದ ಹೊರಡುವ ರೈಲು ಕೆಎಸ್ಆರ್ ಬೆಂಗಳೂರು ಬದಲು ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ರಾತ್ರಿ 8.15 ಗಂಟೆಯಿಂದ ಹೊರಟು ಬೆಂಗಳೂರು ಕಂಟ್ಮೋನ್ಮೆಂಟ್, ಕೆಎಸ್ಆರ್ ಬೆಂಗಳೂರು, ಕೆಂಗೇರಿ, ಮೈಸೂರು, ಹೊಳೆನರಸೀಪುರ, ಹಾಸನ ಮೂಲಕ ಮಂಗಳೂರು ತಲುಪಲಿದೆ.
ಮಂಗಳೂರಿನಿಂದ ಬೆಂಗಳೂರಿಗೆ ರೈಲು ಬೆಳಗ್ಗೆ 6.15ಕ್ಕೆ ಹೊರಡಲಿದೆ.