ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ನಾಳೆಯಿಂದ ಟೋಲ್ ಸಂಗ್ರಹ ಇಲ್ಲ.
ಹೆದ್ದಾರಿ ಕಾಮಗಾರಿ ಸಂಪೂರ್ಣ ಮುಗಿಯುವವರೆಗೂ ಟೋಲ್ ಸಂಗ್ರಹ ಮಾಡಲ್ಲ
ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಮ್ಮ ಟ್ವಿಟ್ಟರ್ಲ್ಲಿ ಘೋಷಿಸಿಕೊಂಡಿದ್ದಾರೆ.
ಫೆಬ್ರವರಿ 28ರಿಂದ ಅಂದರೆ ನಾಳೆಯಿಂದ ಟೋಲ್ ಸಂಗ್ರಹ ಆರಂಭ ಆಗ್ಬೇಕಿತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿತ್ತು.
ಆದ್ರೆ ಬೆಂಗಳೂರು-ನಿಡಘಟ್ಟ ನಡುವಿನ ಮಾರ್ಗದಲ್ಲೇ ಟೋಲ್ ಸಂಗ್ರಹಕ್ಕೆ ಹೆದ್ದಾರಿ ಪ್ರಾಧಿಕಾರ ಅಧಿಸೂಚನೆ ಪ್ರಕಟಿಸಿತ್ತು.
ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ ರಸ್ತೆಗೆ ಶುಲ್ಕ ವಸೂಲಿ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಸೂಚನೆ ಹೊರಡಿಸಿತ್ತು
ಕಾರು, ಜೀಪು, ವ್ಯಾನು – ಏಕಮುಖ ಸಂಚಾರಕ್ಕೆ 135ರೂ. ಅದೇ ದಿನ ಮರು ಸಂಚಾರಕ್ಕೆ 205 ರೂ.
ಸ್ಥಳೀಯ ವಾಹನಗಳಿಗೆ 70 ರೂಪಾಯಿ – ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ ಗೆ 4,525 ರೂಪಾಯಿ
ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್ – ಏಕಮುಖ ಸಂಚಾರಕ್ಕೆ 220 ರೂ. ಅದೇ ದಿನ ಮರು ಸಂಚಾರಕ್ಕೆ 320 ರೂ.
ಸ್ಥಳೀಯ ವಾಹನಗಳಿಗೆ 110 ರೂಪಾಯಿ – ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ಗೆ 7,315 ರೂಪಾಯಿ
ಬಸ್ ಅಥವಾ ಟ್ರಕ್(ಎರಡು ಆಕ್ಸೆಲ್) – ಏಕಮುಖ ಸಂಚಾರಕ್ಕೆ 460 ರೂಪಾಯಿ – ಅದೇ ದಿನ ಮರು ಸಂಚಾರಕ್ಕೆ 690 ರೂಪಾಯಿ
ಸ್ಥಳೀಯ ವಾಹನಗಳಿಗೆ 230 ರೂಪಾಯಿ – ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ ಗೆ 15,325 ರೂಪಾಯಿ.
ವಾಣಿಜ್ಯ ವಾಹನಗಳು (ಮೂರು ಆಕ್ಸೆಲ್) – ಏಕಮುಖ ಸಂಚಾರಕ್ಕೆ 500 ರೂಪಾಯಿ. ಅದೇ ದಿನ ಮರು ಸಂಚಾರಕ್ಕೆ 750 ರೂಪಾಯಿ.
ಸ್ಥಳೀಯ ವಾಹನಗಳಿಗೆ 250 ರೂಪಾಯಿ, ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ಗೆ 16,715 ರೂಪಾಯಿ
ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಯಂತ್ರ, ಬಹು ಆಕ್ಸೆಲ್ ವಾಹನ (6ರಿಂದ 8 ಆಕ್ಸೆಲ್) – ಏಕಮುಖ ಸಂಚಾರಕ್ಕೆ 720 ರೂಪಾಯಿ. ಅದೇ ದಿನ ಮರು ಸಂಚಾರಕ್ಕೆ 1080 ರೂಪಾಯಿ
ಸ್ಥಳೀಯ ವಾಹನಗಳಿಗೆ 360 ರೂಪಾಯಿ – ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ಗೆ 24,030 ರೂಪಾಯಿ
ಅತೀ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್)- ಏಕಮುಖ ಸಂಚಾರಕ್ಕೆ 880 ರೂಪಾಯಿ. ಅದೇ ದಿನ ಮರು ಸಂಚಾರಕ್ಕೆ 1,315 ರೂಪಾಯಿ.
ಸ್ಥಳೀಯ ವಾಹನಗಳಿಗೆ 440 ರೂಪಾಯಿ, ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ ಗೆ 29,255ರೂ ದರ
ADVERTISEMENT
ADVERTISEMENT