ADVERTISEMENT
ಬೆಂಗಳೂರಿಗರೇ ಇನ್ಮುಂದೆ ಪೊಲೀಸರಿಗೆ ದೂರು ನೀಡ್ಬೇಕು ಅಂದ್ರೆ 112ಗೆ ಕರೆ ಮಾಡ್ಬೇಕಿಲ್ಲ. ನಿಮ್ಮ ದೂರುಗಳನ್ನು ವಾಟ್ಸಾಪ್ ಮಾಡಿದರೆ ಸಾಕು.
ಹೌದು ಬೆಂಗಳೂರು ನಗರ ಪೊಲೀಸ್ ಆಯಕ್ತ ಬಿ ದಯಾನಂದ್ ಅವರು ಮಹಾನಗರಿಯಲ್ಲಿ ಇಂಥದ್ದೊಂದು ವ್ಯವಸ್ಥೆಯನ್ನು ಘೋಷಿಸಿದ್ದಾರೆ.
94808 01000 ನಂಬರ್ಗೆ ವಾಟ್ಸಾಪ್ ಮಾಡುವ ಮೂಲಕ ದೂರು ನೀಡಬಹುದು. ಅಹಿತಕರ ಅಥವಾ ಕಾನೂನುಬಾಹಿರ ಘಟನೆಗಳು ನಡೆಯುತ್ತಿವೆ ಎಂದಾದಲ್ಲಿ ಆ ಕುರಿತ ಎಲ್ಲ ರೀತಿಯ ಮಾಹಿತಿಯನ್ನು ವಾಟ್ಸಾಪ್ ಮಾಡುವ ಮೂಲಕ ಮಾತಾಡಬಹುದು.
ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೂನ್ 11ರಂದು ದಯಾನಂದ್ ಅವರು ನಗರದ ಎಸಿಪಿ, ಡಿಸಿಪಿ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತರ ಜೊತೆಗೆ 112 ನಂಬರ್ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ತಿಳಿಯಲು ಹೊಯ್ಸಳ ವಾಹನದಲ್ಲಿ ನಗರದಲ್ಲಿ ಸುತ್ತಾಡಿದ್ದರು.
ಆ ನಗರ ಸುತ್ತಾಟ ವೇಳೆ ಸಿಕ್ಕ ಅನುಭವ ಮತ್ತು ಮಾಹಿತಿ ಆಧರಿಸಿ ಬೆಂಗಳೂರು ನಗರದಲ್ಲಿ ಹೊಸ ಪ್ರಯೋಗಕ್ಕೆ ಆಯುಕ್ತರು ಹೆಜ್ಜೆ ಇಟ್ಟಿದ್ದಾರೆ.
ADVERTISEMENT