ADVERTISEMENT
ಬೆಂಗಳೂರಿನ ದೇವಸ್ಥಾನಗಳಲ್ಲಿ ಇಂದಿನಿಂದ ವಸ್ತ್ರ ಸಂಹಿತೆ ಜಾರಿಯಾಗಿದೆ. ಅಂದರೆ ವಿದೇಶಿ ವೇಷಭೂಷಣದ ಬಟ್ಟೆಗಳನ್ನು ಧರಿಸಿ ದೇವಸ್ಥಾನಕ್ಕೆ ಬರದಂತೆ ಭಕ್ತರಿಗೆ ಮನವಿ ಮಾಡಲಾಗಿದೆ. ವಿದೇಶಿ ವೇಷಭೂಷಣದ ಬಟ್ಟೆಗಳನ್ನು ಧರಿಸಿ ಬರುವ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಲಾಗುತ್ತಿದೆ.
ಕರ್ನಾಟಕ ದೇವಸ್ಥಾನ-ಮಠ, ಧಾರ್ಮಿಕ ಸಂಸ್ಥೆಗಳ ಮಹಾಸಂಘ ರಾಜಧಾನಿಯಲ್ಲಿ ವಸ್ತ್ರ ಸಂಹಿತೆ ಅಭಿಯಾನ ಆರಂಭಿಸಿದೆ. ಬೆಂಗಳೂರಿನ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಸಂಬಂಧ ಫಲಕಗಳನ್ನು ಹಾಕಲಾಗಿದೆ.
ಅಸಭ್ಯ-ಅಸಹ್ಯ, ರಜ-ತಮ ಪ್ರಧಾನ, ತುಂಡು ಬಟ್ಟೆಗಳನ್ನು ಧರಿಸಿ ದೇವಸ್ಥಾನವನ್ನು ಪ್ರವೇಶಿಸಬೇಡಿ.
ಭಕ್ತರು ಮತ್ತು ದರ್ಶನಾರ್ಥಿಗಳು ಭಾರತೀಯ ವೇಷಭೂಷಣ ಪ್ರಕಾರ ಬಟ್ಟೆಗಳನ್ನು ಧರಿಸಿ ದೇವಸ್ಥಾನವನ್ನು ಪ್ರವೇಶಿಸಬೇಕು.
ಸಂಸ್ಕೃತಿ ಪಾಲನೆ ಮಾಡಿ ದೇವಸ್ಥಾನದ ವ್ಯವಸ್ಥಾಪನೆಗೆ ಸಹಕರಿಸಿ
ದೇವಸ್ಥಾನದ ಸಾತ್ವಿಕತೆ ರಕ್ಷಿಸುವುದು ಧರ್ಮ ಕರ್ತವ್ಯ
ಎಂದು ಕರ್ನಾಟಕ ದೇವಸ್ಥಾನ ಮಹಾಸಂಘ ಬೆಂಗಳೂರಿನ ದೇವಸ್ಥಾನಗಳ ಎದುರು ಫಲಕಗಳನ್ನು ಹಾಕಿದೆ.
ADVERTISEMENT