ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮನ್ ಅವರು ಗುರುವಾರ ಎರಡನೇ ವಿವಾಹವಾಗಲಿದ್ದಾರೆ.
48 ವರ್ಷದ ಭಗವಂತ್ ಸಿಂಗ್ ಮನ್ ಅವರು ಗುರ್ ಪ್ರೀತ್ ಕೌರ್ ಅವರನ್ನು ವಿವಾಹವಾಗಲಿದ್ದಾರೆ. ಈ ವಿವಾಹದಲ್ಲಿ ಕುಟುಂಬ ಮತ್ತು ಆತ್ಮೀಯ ಗೆಳೆಯರು ಮಾತ್ರ ಭಾಗಿಯಾಗಲಿದ್ದಾರೆ. ಎಎಪಿ ಪಕ್ಷದ ರಾಷ್ಟ್ರೀಯ ಸಂಯೋಜಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಭಗವಂತ್ ಸಿಂಗ್ ಮನ್ ಅವರು ತಮ್ಮ ಈ ಹಿಂದಿನ ಪತ್ನಿ ಗುರು ಪ್ರೀತ್ ಕೌರ್ ಅವರಿಗೆ 6 ವರ್ಷಗಳ ಹಿಂದೆ ವಿಚ್ಚೇದನ ನೀಡಿದ್ದರು. ಈಗ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಅಮೇರಿಕಾದಲ್ಲಿ ವಾಸವಾಗಿದ್ದಾರೆ.
ಕಳೆದ ಪಂಜಾಬ್ ಚುನಾವಣೆಯಲ್ಲಿ ಎಎಪಿ ಪಕ್ಷವನ್ನು ಭರ್ಜರಿ ಜಯಗಳಿಸಿತ್ತು. ಮೊದಲೇ ಘೋಷಿಸಿದಂತೆ ಭಗವಂತ್ ಸಿಂಗ್ ಮನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ವೇಳೆ ಮೊದಲ ಪತ್ನಿಯೂ ಭಾರತಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ಈಗ ಭಗವಂತ್ ಸಿಂಗ್ ಮನ್ ರನ್ನು ಕೈಹಿಡಿಯುತ್ತಿರುವ ಗುರು ಪ್ರೀತ್ ಕೌರ್ ಅವರು ಸಾಮಾನ್ಯ ಕುಟುಂಬದಿಂದ ಬಂದವರು ಎನ್ನಲಾಗುತ್ತಿದೆ. ಇವರ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ.