ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರಂಭಿಸಿರುವ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) 2,000 ರೂ. ದೇಣಿಗೆ ನೀಡುವಂತೆ ತರಕಾರಿ ವ್ಯಾಪಾರಿ ಬಳಿ ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಾರ್ಯಕರ್ತರನ್ನು ಅಮಾನತುಗೊಳಿಸಲಾಗಿದೆ.
ಭಾರತ್ ಜೋಡೋ ಯಾತ್ರೆಗಾಗಿ ಕೇರಳದ ಕಾರ್ಯಕರ್ತರು ಕೊಲ್ಲಂನ ತರಕಾರಿ ಅಂಡಿಯೊಂದರಲ್ಲಿ ಅಂಗಡಿ ಮಾಲೀಕನಿಗೆ 2 ಸಾವಿರ ಹಣ ನೀಡುವಂತೆ ಬೆದರಿಕೆ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ, ಬಿಜೆಪಿ ನಾಯಕರು ಈ ವಿಡಿಯೋ ಟ್ವೀಟ್ ಮಾಡಿ ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದ್ದರು.
ಇದೀಗ, ಕೇರಳ ಕಾಂಗ್ರೆಸ್ನ ರಾಜ್ಯ ಅಧ್ಯಕ್ಷ ಕೆ.ಸುಧಾಕರನ್ ಹಣಕ್ಕಾಗಿ ತರಕಾರಿ ಅಂಗಡಿ ಮಾಲೀಕನ್ನು ಬೆದರಿಸಿದ 3 ಜನ ಕಾರ್ಯಕರ್ತರನ್ನು ಪಕ್ಷದಿಂದ ವಜಾ ಮಾಡಿದ್ದಾರೆ. ಇದನ್ನೂ ಓದಿ : ರಾಹುಲ್ ಗಾಂಧಿ ಬಗ್ಗೆ ಸುಳ್ಳು ಸುದ್ದಿ ಪ್ರಸಾರ : ಜೀ ವಾಹಿನಿ ಆ್ಯಂಕರ್ ಬಂಧನ
ಏನಿದು ಘಟನೆ?
ಕಾಂಗ್ರೆಸ್ ಕಾರ್ಯಕರ್ತರು ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಸಂಗ್ರಹಿಸುತ್ತಿದ್ದರು. ಈ ವೇಳೆ ಕೊಲ್ಲಂನ ತರಕಾರಿ ಅಂಡಿಯೊಂದಕ್ಕೆ ತೆರಳಿ ಅಂಗಡಿ ಮಾಲೀಕನೊಂದಿಗೆ 2,000 ರೂ. ದೇಣಿಗೆ ನೀಡುವಂತೆ ಕೇಳಿದ್ದಾರೆ. ಅಂಗಡಿ ಮಾಲೀಕ ನಾನು 500 ರೂ. ಕೊಡುವುದಾಗಿ ತಿಳಿಸಿದ್ದಾನೆ. ಈ ವೇಳೆ ಅಂಗಡಿ ಮಾಲೀಕ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಘಟನೆಯ ಬಳಿಕ ಅಂಗಡಿ ಮಾಲೀಕ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಇನ್ನೊಂದು ಪ್ರತಿದೂರು ದಾಖಲಿಸಿದ್ದಾರೆ.
Kerala Pradesh Congress Committee has been doing crowdfunding for years. Their politics runs on small donations at the grassroots. But this should not have happened. These three were clearly fringe elements and exemplary action has been taken immediately by the PCC President. https://t.co/TnvQRkV0NT
— Jairam Ramesh (@Jairam_Ramesh) September 16, 2022
ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು (Bharat Jodo Yatra) ಆರಂಭಿಸಿದ್ದು, ಯಾತ್ರೆಯು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಯಾತ್ರೆಯು 3,500 ಕಿ.ಮೀ ದೂರವನ್ನು ಕ್ರಮಿಸುತ್ತಿದ್ದು 12 ರಾಜ್ಯಗಳನ್ನು ಹಾದುಹೋಗಲಿದೆ. ಇದನ್ನೂ ಓದಿ : Goa Politics : ಗೋವಾದಲ್ಲಿ 8 ಕಾಂಗ್ರೆಸ್ ಶಾಸಕರು ಬಿಜೆಪಿಗೆ?