ಸಾಯಂಗಿದ್ರೇ ನೀನು ಬಸ್ ಗೆ ಸಿಕ್ಕಾಕೊಂಡು ಸಾಯಬೇಕಿತ್ತು. ನಿನಗೆ ಸಾಯೋಕ್ಕೆ ನನ್ನ ಕಾರು ಬೇಕಿತ್ತಾ? ಎಂದು ಕಾರಿಗೆ ಬೈಕ್ ಹೊಡೆದ ವ್ಯಕ್ತಿಗೆ ಭವಾನಿ ರೇವಣ್ಣ ದರ್ಪ ತೋರಿದ್ದಾರೆ.
ಹೌದು ಮೈಸೂರಿನ ಕೆ.ಆರ್ ನಗರ ತಾಲೂಕು ಸಾಲಿಗ್ರಾಮದ ಹೊರವಲಯದಲ್ಲಿ ಭವಾನಿ ರೇವಣ್ಣ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಡಿಕ್ಕಿ ಹೊಡೆದ ಬೈಕ್ ಚಾಲಕನಿಗೆ ಭವಾನಿ ರೇವಣ್ಣ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಕ್ಕಾ ಕಾರು ಸೈಡಿಗೆ ಹಾಕಿ ಅಂದದ್ದಕ್ಕೆ ಸ್ಥಳೀಯರ ವಿರುದ್ಧವೂ ಕಿಡಿಕಾರಿದ್ದು, ಕಾರು ರಿಪೇರಿ ಮಾಡಿಸೋಕೆ ಐವತ್ತು ಲಕ್ಷ ರೂಪಾಯಿ ಹಣಬೇಕು.ಯಾರಾದರೂ ನ್ಯಾಯ ಮಾತಾಡೋರು ಐವತ್ತು ಲಕ್ಷ ಹಣ ಕೊಟ್ಟು ಮಾತಾಡಿ.ಒಂದೂವರೆ ಕೋಟಿ ರೂಪಾಯಿ ಗಾಡಿ ಇದು.ಸಾಲಿಗ್ರಾಮ ಠಾಣೆಯ ಇನ್ಸ್ಪೆಕ್ಟರ್ ಕರೀರಿ.
ತಗೊಂಡ್ ಹೋಗಿ ಇವನನ್ನು ಒಳಗೆ ಹಾಕ್ಲಿ ಎಂದು ಕಿಡಿಕಾರಿದ್ದಾರೆ.
ಅವನು ಸತ್ತೋಗ್ತಾನೆ ಅಂತಾ ಅವನ ಬಗ್ಗೆ ಯಾಕ್ ಯೋಚ್ನೆ ಮಾಡ್ತೀಯಾ?. ಒಂದೂವರೆ ಕೋಟಿ ರೂಪಾಯಿ ಕಾರು ಬಗ್ಗೆ ಯೋಚನೆ ಮಾಡು ಎಂದೆಲ್ಲಾ ಜನರೆದುರು ಭವಾನಿ ರೇವಣ್ಣ ಕೂಗಾಡಿದ್ದಾರೆ.