ಟಿವಿ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಈಗ ದಿನಗಣನೆ ಆರಂಭ ಆಗಿದೆ. ಬಿಗ್ಬಾಸ್ ಸೀಸನ್ 9ರ ಪ್ರೋಮೋ ಶೂಟಿಂಗ್ ಅನ್ನು ಈಗಾಗಲೇ ಕಿಚ್ಚ ಸುದೀಪ್ ಮುಗಿಸಿದ್ದಾರೆ. ಶೀಘ್ರವೇ ಪ್ರೋಮೋ ಕೂಡಾ ಬಿಡುಗಡೆ ಆಗಲಿದೆ.
ದೊಡ್ಮನೆ ಸಿದ್ಧತೆ ಆರಂಭ ಆಗಿದೆ ಎಂದು ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರ ಜೊತೆಗೆ ಪ್ರೋಮೋ ಶೂಟಿಂಗ್ ನ ಫೋಟೋವನ್ನೂ ಹಂಚಿಕೊಂಡಿದ್ದಾರೆ.
ಹಾಗಾದರೆ ಈ ಬಾರಿ ಬಿಗ್ ಬಾಸ್ ಶೋದಲ್ಲಿ ಯಾರ್ಯಾರು ಇರಬಹುದು..? ಯಾವೆಲ್ಲ ಕಂಟೆಸ್ಟೆಂಟ್ ಗಳನ್ನು ಆಯ್ಕೆ ಮಾಡಬಹುದು..? ಎಂಬ ಕುತೂಹಲ ಶುರು ಆಗಿದೆ.
ಬಿಗ್ ಬಾಸ್ ರಿಯಾಲಿಟಿ ಶೋ ಆಗಿರುವ ಕಾರಣ ಜನರಿಗೆ ಹೆಚ್ಚು ಚಿರಪರಿಚಿತ ಇರುವವರನ್ನೇ ಸೆಲೆಕ್ಟ್ ಮಾಡಲಾಗುತ್ತದೆ. ಅದರಲ್ಲೂ ವಿವಾದಿತರಿಗೆ ಹೆಚ್ಚಿನ ಮಣೆ ಹಾಕಲಾಗುತ್ತದೆ.
ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಆ ಮೂಲಕ ಇನ್ಫ್ಲುಯೆನ್ಸರ್ಸ್ ಆಗಿರುವವರನ್ನು ಬಿಗ್ ಬಾಸ್ ಗೆ ಸೆಲೆಕ್ಟ್ ಮಾಡಲಾಗುತ್ತದೆ.
ವಿವಿಧ ಕ್ಷೇತ್ರದಲ್ಲಿರುವವರನ್ನು ದೊಡ್ಮನೆಯಲ್ಲಿ ನಾವು ಕಾಣಬಹುದು. ಈ ಹಿಂದೆಯೂ ಟಿವಿ ನ್ಯೂಸ್ ಆಂಕರ್ಗಳನ್ನು ಬಿಗ್ ಬಾಸ್ ಗೆ ಸೆಲೆಕ್ಟ್ ಮಾಡಲಾಗಿತ್ತು.
ಈ ಬಾರಿಯೂ ಕೆಲವು ಆಂಕರ್ ಗಳ ಹೆಸರು ಚಾಲ್ತಿಯಲ್ಲಿದೆ.
ಜಾಹ್ನವಿ ಕಾರ್ತಿಕ್:
ಇವರು ಕನ್ನಡ ನ್ಯೂಸ್ ಚಾನೆಲ್ ಗಳಲ್ಲಿ ಹೆಸರು ಮಾಡಿರುವ ಆಂಕರ್. ಆರಂಭದಲ್ಲಿ ಉದಯ ಟಿವಿ, ನಂತರ ಬಿಟಿವಿ, ನಂತರ ಟಿವಿ9, ನ್ಯೂಸ್ 18ಯಲ್ಲೂ ಕೆಲಸ ಮಾಡಿರುವ ಇವರು ನ್ಯೂಸ್ ಫಸ್ಟ್ ನಲ್ಲಿ ಆಂಕರ್ ಆಗಿದ್ದಾರೆ. ಹಲವು ರಿಯಾಲಿಟಿ ಶೋ ಗಳಲ್ಲೂ ಭಾಗವಹಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿರುತ್ತಾರೆ.
ಸೋಮಣ್ಣ ಮಾಚಿಮಾಡ:
ಇವರು ಕೂಡಾ ಕನ್ನಡದ ಪ್ರಮುಖ ಟಿವಿ ನ್ಯೂಸ್ ಆಂಕರ್ಗಳ ಪೈಕಿ ಒಬ್ಬರು. ಟಿವಿ9ನಲ್ಲಿ ಹೆಸರು ಮಾಡಿದ್ದ ಇವರು ಆ ಬಳಿಕ ಸಮಯ ನ್ಯೂಸ್ ನಂತರ ನ್ಯೂಸ್ 18 ಕನ್ನಡದಲ್ಲೂ ಕೆಲಸ ಮಾಡಿದ್ದಾರೆ. ಈಗ ಇವರು ನ್ಯೂಸ್ ಫಸ್ಟ್ ನಲ್ಲಿ ಆಂಕರ್ ಆಗಿದ್ದಾರೆ.
ದಿವ್ಯ ವಸಂತಾ:
ಬಿಟ್ಟಿ ಡಾಟಾ ಎಂಬ ಮಾತಿನ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೇ ಟ್ರೋಲ್ ಆದ ಆಂಕರ್. ಇವರು ಬಿಟಿವಿಯಲ್ಲಿ ಆಂಕರ್ ಆಗಿದ್ದಾರೆ. ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಗಿಚ್ಚಿಗಿಲಿಗಿಲಿ ಶೋದಲ್ಲೂ ಕಾಣಿಸಿಕೊಂಡಿದ್ದಾರೆ.
ಸುಕನ್ಯಾ:
ಇವರೂ ಕನ್ನಡದ ಪ್ರಮುಖ ಟಿವಿ ಆಂಕರ್. ಟಿವಿ9 ಕೆಲಸ ಮಾಡಿ ಆ ಬಳಿಕ ಪಬ್ಲಿಕ್ ಟಿವಿಯಲ್ಲೂ ಆಂಕರ್ ಆಗಿದ್ದರು. ಈಗ ಟಿವಿ9ನಲ್ಲಿ ಆಂಕರ್ ಆಗಿದ್ದಾರೆ.