ನಾಳೆಯಿಂದ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ಬಾಸ್ ಸೀಸನ್-9 ಶುರುವಾಗಲಿದೆ.
ದೊಡ್ಮನೆಗೆ ಹೋಗುವ ಮುಖಗಳು ಯಾರು ಎಂಬ ಕುತೂಹಲಕ್ಕೆ ಮೊದಲ ಉತ್ತರ ಸಿಕ್ಕಿದೆ.
ಕನ್ನಡದ ಪ್ರಮುಖ ಸುದ್ದಿವಾಹಿ ನ್ಯೂಸ್ ಫಸ್ಟ್ ಆಂಕರ್ ಸೋಮಣ್ಣ ಮಾಚಿಮಾಡ ಅವರು ಬಿಗ್ ಬಾಸ್ ಶೋಗೆ ಎಂಟ್ರಿ ಕೊಡ್ತಿದ್ದಾರೆ.
ಮಾಚಿಮಾಡ ಅವರನ್ನು ಇದುವರೆಗೆ ನ್ಯೂಸ್ ಫಸ್ಟ್ ಚಾನೆಲ್ ಮತ್ತು ಯೂಟ್ಯೂಬ್ ಚಾನೆಲ್ ನಲ್ಲಿ ನೋಡುತ್ತಿದ್ದ ಅಭಿಮಾನಿಗಳು ಇನ್ನು 100 ದಿನ ಇವರನ್ನು ಬಿಗ್ ಬಾಸ್ ಮನೆಯಲ್ಲಿ ನೋಡಬಹುದು.
ADVERTISEMENT
ಈ ಹಿಂದೆ ಕನ್ನಡದ ಸುದ್ದಿವಾಹಿನಿ ಟಿವಿ9ನ ಆಂಕರ್ ರೆಹಮಾನ್, ಕೀರ್ತಿ ಶಂಕರಘಟ್ಟ ಕೂಡಾ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು.
ADVERTISEMENT