ಬೆಳ್ಳಂ ಬೆಳಗ್ಗೆ ತೈಲ ಕಂಪನಿಗಳು ವಾಹನ ಸವಾರರಿಗೆ ಶಾಕ್ ನೀಡಿವೆ. ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಿವೆ. ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 80ಪೈಸೆ ಹೆಚ್ಚಳವಾಗಿದೆ.ಇದು ಮುಂದಿನ ದಿನಗಳಲ್ಲೋ ನಿತ್ಯ ನೂತನವಾಗುವ ಎಲ್ಲಾ ಸಾಧ್ಯತೆಗಳು ಇವೆ.
ನವೆಂಬರ್ 1ರ ಬಳಿಕ ಮೊದಲ ಬಾರಿ ನಡೆಯುತ್ತಿರುವ ಹೆಚ್ಚಳ ಇದಾಗಿದೆ.
ನಿನ್ನೆಯಷ್ಟೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 111ಡಾಲರ್ ಗೆ ಏರಿಕೆ ಆಗಿತ್ತು.
ಪಂಚರಾಜ್ಯ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ತೈಲ ದರ ಏರಿಕೆ ಆಗಬಹುದು ಎಂದು ಎಲ್ಲರೂ ಅಂದಾಜಿಸಿದ್ದರು.