ADVERTISEMENT
ಪೋಕ್ಸೋ (POCSO) ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯುವಂತೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದಡಿ ADGP (ಕಾನೂನು ಸುವ್ಯವಸ್ಥೆ Law and Order) ಅಲೋಕ್ ಕುಮಾರ್ (Alok Kumar) ಅವರ ವಿರುದ್ಧ ಖಾಸಗಿ ದೂರು ದಾಖಲಿಸುವಂತೆ ಬೆಂಗಳೂರಿನ 39ನೇ ಎಸಿಎಎಂ ಕೋರ್ಟ್ ಆದೇಶಿಸಿದೆ (Bengaluru Court) ಎಂದು ಪ್ರಮುಖ ಇಂಗ್ಲೀಷ್ ದೈನಿಕ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಎಡಿಜಿಪಿ ಅಲೋಕ್ ಕುಮಾರ್ ವಿರುದ್ಧ IPC ಸೆಕ್ಸನ್ 12-ಎ, 166-ಎ, 323, 325 ಮತ್ತು 506 ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲು ನ್ಯಾಯಾಲಯ ಸೂಚಿಸಿದೆ.
ಖಾಸಗಿ ದೂರು ದಾಖಲಾದ ಬಳಿಕ ನ್ಯಾಯಾಲಯ ದೂರುದಾರ ಮಹಿಳೆಯ ಹೇಳಿಕೆಯನ್ನು ದಾಖಲಿಸಲಿದೆ.
ಎಡಿಜಿಪಿ ಅಲೋಕ್ ಕುಮಾರ್ ವಿರುದ್ಧ ಖಾಸಗಿ ದೂರು ದಾಖಲಿಸುವಂತೆ ಕೋರಿ ದೂರುದಾರೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ಮಾನ್ಯ ಮಾಡಿದೆ.
ಏನಿದು ಪ್ರಕರಣ:
2016ರಲ್ಲಿ ಬಿಹಾರ ಮೂಲದ ವ್ಯಕ್ತಿಯೊಬ್ಬರ ವಿರುದ್ಧ ದೂರುದಾರ ಮಹಿಳೆ ಪೋಕ್ಸೋ ಕಾಯ್ದೆಯಡಿ ದೂರು ನೀಡಿದ್ದರು. ಆ ದೂರನ್ನು ಹಿಂಪಡೆದು ನ್ಯಾಯಾಲಯದ ಹೊರಗೆ ರಾಜಿ ಮಾಡಿಕೊಳ್ಳುವಂತೆ ಸಿಸ್ಟರ್ ಶಾಲಿನಿ ಎಂಬವರು ಒತ್ತಡ ಹೇರಿದ್ದರು ಮತ್ತು ಬೆದರಿಕೆ ಹಾಕಿದ್ದರು.
ಈ ಸಂಬಂಧ ಫೆಬ್ರವರಿ 11, 2019ರಂದು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಕಚೇರಿಗೆ ಆ ದೂರುದಾರೆ ಮಹಿಳೆ ತೆರಳಿದ್ದರು. ಈ ವೇಳೆ ಅಲೋಕ್ ಕುಮಾರ್ ಅವರು ಕೇಸ್ ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಲ್ಲದೇ ಮುಖದ ಮೇಲೆ ಗುದ್ದಿ ಹಲ್ಲೆಯನ್ನೂ ನಡೆಸಿದ್ದರು ಮತ್ತು ತಾನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಳಿಕ ಚಿಕಿತ್ಸೆ ಪಡೆದಿದ್ದಾಗಿ ಅಲೋಕ್ ಕುಮಾರ್ ವಿರುದ್ಧ ದೂರು ಆ ಮಹಿಳೆ ದೂರಿದ್ದರು.
ಈ ಘಟನೆ ಬಳಿಕ ದೂರುದಾರೆ ಮಹಿಳೆ ಪೊಲೀಸ್ ಆಯುಕ್ತರಾಗಿದ್ದ ಸುನಿಲ್ ಕುಮಾರ್ ಮತ್ತು ಗೃಹ ಸಚಿವರನ್ನು ಭೇಟಿ ಆಗಿದ್ದರೂ ಪ್ರಯೋಜನ ಆಗಿರಲಿಲ್ಲ.
ಆದರೆ ಇದಾದ ಬಳಿಕ ಮಾರ್ಚ್ 25, 2019ರಂದು ವಿಧಾನಸೌಧ ಠಾಣೆ ಪೊಲೀಸರು ಈ ದೂರುದಾರ ಮಹಿಳೆಯ ವಿರುದ್ಧವೇ ಎಡಿಜಿಪಿ ಅಲೋಕ್ ಕುಮಾರ್ ನೀಡಿದ್ದ ದೂರು ಆಧರಿಸಿ ಕಚೇರಿಯಲ್ಲಿ ಗಲಾಟೆ ಮಾಡಿದ್ದಾರೆ ಎಂಬ ಆರೋಪದಡಿ ಎಫ್ಐಆರ್ ದಾಖಲಿಸಿದ್ದರು.
ಈ ಎಫ್ಐಆರ್ ರದ್ದತಿ ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೊರೆ ಹೋಗಿದ್ದರು. ವಿಧಾನಸೌಧದ ಪೊಲೀಸರು ದಾಖಲಿಸಿದ್ದ ಎಫ್ಐಆರ್ರನ್ನು ಕಾನೂನಿನ ದುರ್ಬಳಕೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಮಹಿಳೆ ವಿರುದ್ಧದ ಎಫ್ಐಆರ್ ರದ್ದುಪಡಿಸಿತ್ತು.
ADVERTISEMENT