ಬಾಂಗ್ಲಾ ದೇಶದಲ್ಲಿ ಇಸ್ಕಾನ್ನ ರಾಧಾಕೃಷ್ಣ ದೇವಸ್ಥಾನದ ಮೇಲೆ 200 ಕ್ಕೂ ಹೆಚ್ಚಿನ ಜನ ದಾಳಿ ಮಾಡಿ ಧ್ವಂಸ ಮಾಡಿದ್ದಾರೆ. ದೇವಸ್ಥಾನವನ್ನು ಲೂಟಿಯನ್ನೂ ಮಅಡಲಾಗಿದೆ ಎಂದು ವರದಿಯಾಗಿದೆ.
ಬಾಂಗ್ಲಾದ ಡಾಕಾದಲ್ಲಿನ ವಾರ ನಗರದಲ್ಲಿನ ಮೋಹನ್ ಶಾಹ ಸ್ಟ್ರೀಟ್ನಲ್ಲಿನ ರಾಧಾಕೃಷ್ಣ ದೇವಸ್ಥಾನ ಧ್ವಂಸ ಆಗಿರುವಂತಹದು. ವರದಿಗಳ ಪ್ರಕಾರ, ಈ ದಾಳಿಯಲ್ಲಿ ಸುಮಂತ್ರ ಚಂದ್ರ ಶರ್ವಣ್, ನಿಹಾರ್ ಹಲ್ದಾರ್, ರಾಜೀವ್ ಭದ್ರ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಹಾಜಿ ಶಪೀಹುಲ್ಲಾ ಎನ್ನುವ ವ್ಯಕ್ತಿ ಈ ದಾಳಿಕೋರರ ನಾಯಕತ್ವ ವಹಿಸಿಕೊಂಡಿದ್ದ ಎನ್ನಲಾಗಿದೆ.
ಕಳೆದ ವರ್ಷ ಬಾಂಗ್ಲಾದ ಕೋಮಿಲ ಟೌನ್ ನ ನನೌರಗ ಡಿಗಿ ಲೇಕ್ ಹತ್ತಿರ ದುರ್ಗಾ ಪೋಜೆಯ ಪೆಂಡಾಲ್ನಲ್ಲಿ ಕುರಾನ್ ಅನ್ನು ಅಪವಿತ್ರಗೊಳಿಸಲಾಗಿದೆ ಎಂದು ಸೋಜಿಯಲ್ ಮೀಡಿಯಾದಲ್ಲಿ ವೈರಲ್ ಆದ ಮೇಲೆ. ಮೂವರು ಹಿಂದೂಗಳನ್ನು ಹತ್ಯೆಮಾಡಲಾಗಿತ್ತು.
ಅಲ್ಲದೇ, ಢಾಕಾದ ಟಿಪ್ಪು ಸುಲ್ತಾನ್ ರಸ್ತೆ ಮತ್ತು ಚಿತ್ತಗಾಂಗ್ನ ಕೊಟ್ವಾಲಿಯಲ್ಲಿಯೂ ಇದೇ ರೀತಿಯ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿದ್ದವು.