ಯಡಿಯೂರಪ್ಪ (Yadiyurappa), ಪುತ್ರ ವಿಜಯೇಂದ್ರ ವಿರುದ್ಧದ ಲೋಕಾಯುಕ್ತ ತನಿಖೆಗೆ ಸುಪ್ರೀಂಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ.
ಸೆ.16 ರಂದು ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ, ಪುತ್ರ ವಿಜಯೇಂದ್ರ, ಸಚಿವ ಎಸ್ಟಿ ಸೋಮಶೇಖರ್, ಯಡಿಯೂರಪ್ಪ ಮೊಮ್ಮಗ ಶಶಿಧರ್ ಮರಡಿ, ಅಳಿಯ ವಿರುಪಾಕ್ಷಪ್ಪ ಯಮಕನಮರಡಿ, ಚಂದ್ರಕಾಂತ್ ರಾಮಲಿಂಗಂ, ಡಾ.ಜೆ.ಸಿ ಪ್ರಕಾಶ್ ವಿರುದ್ಧ ಎಫ್ಐಆರ್ ದಾಖಲಿಸಿತ್ತು.
ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ಸೂಚನೆಯ ಮೇರೆಗೆ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿತ್ತು. ಆದರೆ, ತನಿಖೆಗೆ ತಡೆ ಕೋರಿ ಯಡಿಯೂರಪ್ಪ ಮತ್ತು ಇತರರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಸಾಮಾಜಿಕ ಹೋರಾಟಗಾರ ಟಿಜೆ ಅಬ್ರಹಾಂ ದೂರು ಆಧರಿಸಿ ಬೆಂಗಳೂರಿನ ಕೋರ್ಟ್ ಎಫ್ಐಆರ್ ದಾಖಲಿಸಲು ಲೋಕಾಯುಕ್ತಕ್ಕೆ ಸೂಚಿಸಿತ್ತು.
2017ರಲ್ಲಿ ಅನುಮೋದನೆಗೊಂಡಿದ್ದ ಬಿಡಿಎ ವಸತಿ ಸಮುಚ್ಚಯ ನಿರ್ಮಾಣದ ಕಾಮಗಾರಿಯ ಕಾರ್ಯಾದೇಶಕ್ಕಾಗಿ 2019ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ (Yadiyurappa) ಮತ್ತು ಕುಟುಂಬಸ್ಥರಿಗೆ 12 ಕೋ.ರೂ. ಲಂಚ ನೀಡಲಾಗಿತ್ತು. ಮತ್ತು ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿ ಯಡಿಯೂರಪ್ಪ ಕುಟುಂಬಸ್ಥರ ನಕಲಿ ಕಂಪನಿಗಳಿಗೆ 5 ಕೋ.ರೂ ಹಣ ಸಂದಾಯ ಮಾಡಿತ್ತು ಎಂಬ ಆರೋಪದಡಿ ಎಫ್ಐಆರ್ ದಾಖಲಾಗಿತ್ತು.
ಇದನ್ನೂ ಓದಿ : BIG BREAKING: ಯಡಿಯೂರಪ್ಪ, ಪುತ್ರ ವಿಜಯೇಂದ್ರ, ಸಚಿವ ಸೋಮಶೇಖರ್ ವಿರುದ್ಧ FIR ದಾಖಲು