ವಿವಾದಾತ್ಮಕ ಹೇಳಿಕೆ ಪ್ರಕರಣದಲ್ಲಿ ನಟಿ ಸಾಯಿ ಪಲ್ಲವಿಗೆ ಬಿಗ್ ಶಾಕ್ ಎದುರಾಗಿದೆ. ಆಕೆ ಹಾಕಿದ್ದ ಅರ್ಜಿಯನ್ನು ಹೈದ್ರಾಬಾದ್ ಹೈಕೋರ್ಟ್ ವಜಾ ಮಾಡಿದೆ.
ವಿರಾಟಪರ್ವಮ್ ಪ್ರಮೋಷನ್ ವೇಳೆ, ಕಾಶ್ಮೀರ್ ಫೈಲ್ಸ್ ಸಿನಿಮಾ ಜೊತೆಗೆ ಗೊರಕ್ಷಕರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಭಜರಂಗ ದಳಡ್ ಕಾರ್ಯಕರ್ತರು ಹೈದ್ರಾಬಾದ್ ಣ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಹೀಗಾಗಿ ಪೊಲೀಸರು, ಜೂನ್ 21ರಂದು ವಿಚಾರಣೆಗೆ ಹಾಜರಾಗುವಂತೆ ನಟಿ ಸಾಯಿ ಪಲ್ಲವಿಗೆ ನೋಟೀಸ್ ಜಾರಿ ಮಾಡಿದ್ದರು. ಈ ಪೊಲೀಸ್ ನೋಟೀಸ್ ರದ್ದು ಮಾಡುವಂತೆ ಕೋರಿ ಸಾಯಿ ಪಲ್ಲವಿ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಸಾಯಿ ಪಲ್ಲವಿ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಶೀಘ್ರವೇ ಸಾಯಿ ಪಲ್ಲವಿ ಪೋಲೀಸರ ವಿಚಾರಣೆ ಎದುರಿಸುವ ಸಂಭವ ಇದೆ.