ಬಿಲ್ಕಿಸ್ ಬಾನೋ ಮೇಲೆ ಅತ್ಯಾಚಾರ ನಡೆಸಿದ್ದವರಲ್ಲಿ ಕೆಲವರು ಬ್ರಾಹ್ಮಣರಾಗಿದ್ದರು ಮತ್ತು ಅವರು ಒಳ್ಳೆಯ ಸಂಸ್ಕಾರ ಹೊಂದಿದ್ದಾರೆ ಎಂದು ಗೋಧ್ರಾ ಬಿಜೆಪಿ ಶಾಸಕ ಸಿ ಕೆ ರೌಲ್ಜಿ (BJP MLA C K Raulji) ಹೇಳಿದ್ದಾರೆ.
ಗುಜರಾತ್ನ ಗೋಧ್ರಾದಲ್ಲಿ (Godhra) ಬಿಲ್ಕಿಸ್ ಭಾನು (Bilkis Bhanu) ಮೇಲೆ ಅತ್ಯಾಚಾರ ನಡೆಸಿದ್ದ 15 ಮಂದಿ ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಆಗಸ್ಟ್ 15ರಂದು ಗುಜರಾತ್ನ (Gujarat) ಬಿಜೆಪಿ ಸರ್ಕಾರ ಜೈಲಿನಿಂದ ಬಿಡುಗಡೆ ಮಾಡಿತ್ತು.
ಕೈದಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಸಂಬಂಧ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರ ರಚಿಸಿರುವ ಸಮಿತಿಯಲ್ಲಿ ಬಿಜೆಪಿ ಶಾಸಕ ರೌಲ್ಜಿ ಕೂಡಾ ಒಬ್ಬರು.
ನಾವು ಸುಪ್ರೀಂಕೋರ್ಟ್ ಆದೇಶದಡಿ ನಿರ್ಧಾರ ತೆಗೆದುಕೊಂಡಿದ್ದೇವೆ. ಅವರ ವರ್ತನೆಯನ್ನು ಗಮನಿಸಿ ನಿರ್ಧಾರ ಕೈಗೊಳ್ಳುವಂತೆ ನಮಗೆ ಸೂಚಿಸಲಾಗಿತ್ತು. ನಾವು ಈ ಬಗ್ಗೆ ಜೈಲರ್ ಬಳಿ ಕೇಳಿದ್ವಿ. ಅವರ ವರ್ತನೆ ಜೈಲಿನಲ್ಲಿ ಸನ್ನಡೆತೆಯಿಂದ ಕೂಡಿತ್ತು ಎಂದು ಕೇಳಿಪಟ್ವಿ. ಜೊತೆಗೆ ಅದರಲ್ಲಿ ಕೆಲವರು ಬ್ರಾಹ್ಮಣರಾಗಿದ್ದರು ಮತ್ತು ಅವರು ಒಳ್ಳೆಯ ಸಂಸ್ಕಾರ ಹೊಂದಿದ್ದರು
ಎಂದು ಬಿಜೆಪಿ ಶಾಸಕ ಸಿ ಕೆ ರೌಲ್ಜಿ ಹೇಳಿದ್ದಾರೆ.
2002ರಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಬಿಲ್ಕಿಸ್ ಭಾನು ಮೇಲೆ ಕುಟುಂಬದ ಮೇಲೆ ದಾಳಿ ನಡೆಸಿದ್ದ ಈ 11 ಮಂದಿ ಅಪರಾಧಿಗಳು ಆಕೆಯ ಕುಟುಂಬದ 7 ಮಂದಿಯನ್ನು ಕೊಲೆಗೈದಿದ್ದರು ಮತ್ತು 5 ತಿಂಗಳ ಗರ್ಭಿಣಿ ಆಗಿದ್ದ ಬಿಲ್ಕಿಸ್ ಭಾನು ಮೇಲೆ ಅತ್ಯಾಚಾರ ಎಸಗಿದ್ದರು.
2008ರಲ್ಲಿ ಮುಂಬೈನ ಸಿಬಿಐ ಕೋರ್ಟ್ 11 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿತ್ತು.
ಆಗಸ್ಟ್ 15ರಂದು ಜೈಲಿನಿಂದ ಬಿಡುಗಡೆ ಆದ ಈ 11 ಮಂದಿ ಅಪರಾಧಿಗಳನ್ನು ವಿಹೆಚ್ಪಿ ಹಾರ ಹಾಕಿ ಸ್ವಾಗತಿಸಿತ್ತು.